ಪಾಕ್ ರಾಷ್ಟ್ರಾಧ್ಯಕ್ಷರಾಗಿ ಜನರಲ್ ಪರ್ವೇಜ್ ಮುಷರಫ್ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಪಾಕಿಸ್ತಾನದ ಸೇನಾಧ್ಯಕ್ಷರಾಗಿ ಜನರಲ್ ಅಶಫಖ್ ಕಯಾನಿ ಅಧಿಕಾರ ಸ್ವೀಕರಿಸಿದರು
ಕಯಾನಿ ತಮ್ಮ ಕಚೇರಿಗೆ ತೆರಳುವ ಮುನ್ನ ರಾವಲ್ಪಿಂಡಿಯಲ್ಲಿರುವ ಸೇನಾನೆಲೆಯಲ್ಲಿ ಗೌರವ ವಂದನೆ ಸ್ವೀಕರಿಸಿದರು.
ಪಾಕ್ ಸೇನಾ ಮುಖ್ಯಸ್ಥ ಹುದ್ದೆಯನ್ನು ಮುಷರಫ್ ತೊರೆದ ಹಿನ್ನಲೆಯಲ್ಲಿ ಐಎಸ್ಐನ ಮಾಜಿ ಮುಖ್ಯಸ್ಥರಾಗಿದ್ದ ಕಯಾನಿ ಅವರಿಗೆ ಸೇನಾಧ್ಯಕ್ಷ ಸ್ಥಾನಕ್ಕೆ ಮುಷರಫ್ ಅವರು ನೇಮಕ ಮಾಡಿದ್ದಾರೆ.
ಪಾಕ್ ರಕ್ಷಣಾ ಸಚಿವಾಲಯ ಕಳೆದ ರಾತ್ರಿ ಜನರಲ್ ಪರ್ವೇಜ್ ಮುಷರಫ್ ಅವರ ನಿವೃತ್ತಿ ಮತ್ತು ಕಯಾನಿ ಅವರ ನೇಮಕದ ಸೂಚನೆಯನ್ನು ನೀಡಿತ್ತು.
|