ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿ ಇಸ್ಲಾಮಿಕ್ ಉಗ್ರರನ್ನು ಗುರಿಯಾಗಿಸಿ ಪಾಕ್ ಸೇನೆ ನಡೆಸಿದ ದಾಳಿಯಲ್ಲಿ 11 ನಾಗರಿಕರು ಬಲಿಯಾಗಿದ್ದಾರೆ.
ತಾಲಿಬಾನ್ ಬೆಂಬಲಿತ ಮೌಲ್ವಿಯ ವಿರುದ್ದ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಸಿಡಿಸಿದ ಶೆಲ್‌ನಿಂದಾಗಿ ಅಲ್ಲಾಹ್‌ಬಾದ್ ಗ್ರಾಮದ ಮನೆಯೊಂದಕ್ಕೆ ಬಡಿದಾಗ ಮನೆಯಲ್ಲಿದ್ದ 11 ಮಂದಿ ಕುಟುಂಬದ ಸದಸ್ಯರು ಸ್ಥಳದಲ್ಲಿ ಮೃತರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ವಜಿರಿಸ್ತಾನ್‌ನಿಂದ 30 ಕಿ.ಮಿ. ದೂರದಲ್ಲಿರುವ ಮಿರಾನ್‌ಶಾಹ್ ಪ್ರದೇಶದಲ್ಲಿ ಸೈನಿಕರನ್ನು ಕರೆದೊಯ್ಯಿತ್ತಿದ್ದ ವಾಹನದ ಮೇಲೆ ಉಗ್ರರು ಬಾಂಬ್ ದಾಳಿ ನಡೆಸಿದಾಗ ಐವರು ಸೈನಿಕರು ಮೃತರಾಗಿದ್ದು ನಾಲ್ಕು ಮಂದಿ ಸೈನಿಕರು ಗಾಯಗೊಂಡಿದ್ದಾರೆ ಎಂದು ಮೇಜರ್ ಜನರಲ್ ವಹೀದ್ ರಷೀದ್ ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಸೈನಿಕರನ್ನು ನೆರೆಯ ಪ್ರಾಂತ್ಯದ ಮೀರ್ ಅಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಉಗ್ರರ ಪ್ರಮುಖ ತಾಣವಾಗಿದೆ ಎಂದು ಸ್ಥಳಿಯ ಗುಪ್ತ ಅಧಿಕಾರಿಗಳು ತಿಳಿಸಿದ್ದಾರೆ.
|