ಮಿಲಿಟರಿ ಸಮವಸ್ತ್ರ ತ್ಯಜಿಸಿದ ಮಾರನೆಯ ದಿನವೇ ಅಧ್ಯಕ್ಷರಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದ ಕೆಲವೇಗಂಟೆಗಳಲ್ಲಿ ಡಿಸೆಂಬರ್ 16ರಂದು ತುರ್ತುಪರಿಸ್ಥಿತಿಯನ್ನು ತೆರವು ಮಾಡುವುದಾಗಿ ಮುಷರ್ರಫ್ ಘೋಷಿಸಿದ್ದಾರೆ.
ಇಸ್ಲಾಮಾಬಾದ್‌ನಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು ಮುಂಚೆ ಪ್ರಕಟಿಸಿರುವಂತೆ ಜ.8ರಂದು ಸಾರ್ವತ್ರಿಕ ಚುನಾವಣೆ ನಡೆಯುವುದೆಂದು ಘೋಷಿಸಿದ್ದಾರೆ. ಪಾಕಿಸ್ತಾನಕ್ಕೆ ಸಮೀಪಿಸಿದ್ದ ಬಿಕ್ಕಟ್ಟಿನಿಂದ ಪಾರುಮಾಡಿರುವುದಾಗಿ ಹೇಳಿದ ಮುಷರ್ರಫ್ ಪ್ರಜಾಪ್ರಭುತ್ವ ನಾಶಕ್ಕೆ ಪ್ರಯತ್ನ ನಡೆಯಿತೆಂದು ಹೇಳಿದ್ದಾರೆ.
ಜನವರಿಯಲ್ಲಿ ನಡೆಯುವ ಚುನಾವಣೆಯನ್ನು ರಾಜಕೀಯ ಪಕ್ಷಗಳು ಬಹಿಷ್ಕರಿಸುವುದಿಲ್ಲವೆಂಬ ಆಶಾವಾದವನ್ನು ಅವರು ವ್ಯಕ್ತಪಡಿಸಿದರು. ಕಳೆದ ನ.3ರಂದು ಮುಷರ್ರಫ್ ತುರ್ತುಪರಿಸ್ಥಿತಿಯನ್ನು ಹೇರಿ ಸಂವಿಧಾನವನ್ನು ಅಮಾನತಿನಲ್ಲಿ ಇರಿಸಿದ್ದರು.
|