ಪಾಕಿಸ್ತಾನದ ರಾಷ್ಟ್ರಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮುಷರಫ್ ತಮ್ಮ ಹಾಗೂ ಸೇನಾ ಮುಖ್ಯಸ್ಥ ಕಯಾನಿ ಅವರ ಅಡಳಿತಾವಧಿಯಲ್ಲಿ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಹೇಳಿದ್ದಾರೆ.
ದೇಶದ 12ನೇಯ ನಾಗರಿಕ ರಾಷ್ಟ್ರಪತಿಯಾಗಿ ಆಯ್ಕೆಯಾದ ಮುಷರಫ್ ಎಂತಹದೇ ಸಂದರ್ಭದಲ್ಲಿ ಚುನಾವಣೆಗಳನ್ನು ಜನೆವರಿ 8ರಂದು ನಡೆಸುವುದಾಗಿ ಅಶ್ವಾಸನೆ ನೀಡಿದ್ದಾರೆ.
ತುರ್ತುಪರಿಸ್ಥಿತಿ ಹಿಂದಕ್ಕೆ ತೆಗೆದುಕೊಳ್ಳುವುದು ಅಸಮಂಜಸ ವಿಚಾರವೇನಲ್ಲ.ಡಿಸೆಂಬರ್ 16 ರಂದು ಹಿಂದಕ್ಕೆ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ತುರ್ತುಪರಿಸ್ಥಿತಿ ಭಯೋತ್ಪಾದನೆ ವಿರುದ್ದದ ಹೋರಾಟದಲ್ಲಿ ಸಹಕಾರಿಯಾಗಿದೆ ಎಂದು ಹೇಳಿದ್ದಾರೆ.
|