ಅಫಘಾನಿಸ್ಥಾನದಲ್ಲಿರುವ ಯುರೋಪಿಯನ್ ಪಡೆಗಳು ಮರಳಿ ಸ್ವದೇಶಕ್ಕೆ ತೆರಳುವಂತೆ ಆಲ್-ಕೈದಾ ನಾಯಕ ಒಸಾಮಾ ಬಿನ್ ಲಾಡೆನ್ ಅಲ್-ಜಜೀರಾ ವಾಹಿನಿಗೆ ನೀಡಿದ ಸಂದೇಶದಲ್ಲಿ ಒತ್ತಾಯಿಸಿದ್ದಾರೆ.
ಅಲ್-ಜಜೀರಾ ಆಡೀಯೊ ಒಸಮಾ ಬಿನ್ ಲಾಡೆನ್ ಸಂದೇಶವನ್ನು ಪ್ರಸಾರ ಮಾಡಿದ್ದು, ಯುರೋಪಿಯನ್ ಮಿತ್ರಪಡೆಗಳು ಯುದ್ದ ನೀತಿಗಳನ್ನು ಉಲ್ಲಂಘಿಸಿ ಮಹಿಳೆ ಮಕ್ಕಳನ್ನು ಹತ್ಯೆ ಮಾಡುತ್ತಿವೆ. ಇದೊಂದು ನ್ಯಾಯವಲ್ಲದ ಯುದ್ದ ಎಂದು ಕಿಡಿಕಾರಿದ್ದಾರೆ.
ಮುಸ್ಲಿಂ ಮಹಿಳೆ ಯುದ್ದ ಮಾಡುವುದಿಲ್ಲವೆಂಬ ಅರಿವಿದ್ದಾಗಲೂ ಮಹಿಳೆಯರನ್ನು ಹಿಂಸಿಸಿ ಹತ್ಯೆ ಮಾಡುತ್ತಿರುವುದು ಯುದ್ದ ನೀತಿಗಳನ್ನು ಉಲ್ಲಂಘಿಸಿದಂತಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾನೆ.
ಸೆಪ್ಟೆಂಬರ್ 11 ರಂದು ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ ನಗರಗಳಲ್ಲಿ ನಡೆದ ದಾಳಿಗೆ ನಾನು ಸಂಪೂರ್ಣ ಹೊಣೆಯಾಗಿದ್ದು, ಅಫಘಾನಿಸ್ಥಾನದ ನಾಗರಿಕರಲ್ಲ. ಕೂಡಲೇ ಯುರೋಪಿಯನ್ ಜನತೆ ತಮ್ಮ ಸರಕಾರಗಳ ಮೇಲೆ ಒತ್ತಡ ಹೇರಿ ಅಫಘಾನಿಸ್ಥಾನ ಮತ್ತು ಇರಾಕ್‌ನಲ್ಲಿರುವ ಪಡೆಗಳನ್ನು ಹಿಂದಕ್ಕೆ ಮರಳುವಂತೆ ಒತ್ತಾಯಿಸಬೇಕು ಎಂದು ಲಾಡೆನ್ ಕರೆ ನೀಡಿದ್ದಾನೆ.
ಅಲ್-ಜಜೀರಾ ಆಡೀಯೊ ಒಸಮಾ ಬಿನ್ ಲಾಡೆನ್ ಸಂದೇಶ ಲಾಡನ್ ಅವರದೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಗುಪ್ತಚರ ದಳದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಸೆಪ್ಟೆಂಬರ್ 11 ರಂದು ನಡೆದ ದಾಳಿಯ ಹೊಣೆಯನ್ನು ಒಸಮಾ ಹೊತ್ತುಕೊಂಡಿದ್ದು,ಯುರೋಪಿಯನ್‌ರನ್ನು ಅಫಘಾನಿಸ್ಥಾನದ ಹೊರಹೋಗುವಂತೆ ಒತ್ತಾಯಿಸಿರುವುದು ಹೊಸ ತಂತ್ರವೇನಲ್ಲ ಎಂದು ಅಮೆರಿಕದ ವಿದೇಶಾಂಗ ವ್ಯವಹಾರಗಳ ವಕ್ತಾರ ಸಿಯಾನ್ ಮ್ಯಾಕ್‌ಕೊಮ್ಯಾಕ್ ಹೇಳಿದ್ದಾರೆ.
|