ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಡಯಾನಾ ಕಾರು ಅಪಘಾತವಲ್ಲ, ಸಂಚು
PTI
ಪ್ರಿನ್ಸ್ ಡಯಾನಾ ಮತ್ತು ದೋದಿ ಪಯಣಿಸುತ್ತಿದ್ದ ಕಾರು ಅಪಘಾತವಾಗುವ ಕೆಲವೇ ನಿಮಿಷಗಳ ಮೊದಲು ಇದೊಂದು ಸಂಚು ಎಂದು ತಮಗೆ ತಿಳಿದುಬಂದಿತ್ತು ಎಂದು ಮೊಹಮ್ಮದ್ ಅಲ್-ಫಯಾದ್ ತಿಳಿಸಿದ್ದಾರೆ.

ಡಯಾನಾ ಮತ್ತು ದೋದಿ ಪಯಣಿಸುತ್ತಿದ್ದ ಕಾರು ಅಪಘಾತವಾದ 20 ನಿಮಿಷಗಳ ನಂತರ ತಾವು ಫಯಾದ್ ಅವರಿಗೆ ದೂರವಾಣಿ ಕರೆ ಮಾಡಿ ಕ್ಷಮಿಸಿ ನಿಮ್ಮ ಮಗ ಪಯಣಿಸುತ್ತಿದ್ದ ಕಾರು ಅಪಘಾತವಾಗಿದೆ ಎಂದು ತಿಳಿಸಿದ್ದಾಗಿ ಪ್ಯಾರಿಸ್‌ನಲ್ಲಿರುವ ರಿಟ್ಝ್ ಹೋಟೆಲ್ ಮಾಲೀಕ ಫ್ರೆಂಝ್ ಕ್ಲೇನ್ ನ್ಯಾಯಾಲಯದಲ್ಲಿ ತಿಳಿಸಿದ್ದಾರೆ.

ಅಪಘಾತವಾದ ನಂತರ ಫಯಾದ್ ಅವರು ರಾಜಕುಮಾರಿ ಡಯಾನಾ ಹೇಗಿದ್ದಾರೆ ಎಂದು ನನ್ನನ್ನು ಕೇಳಿದಾಗ ಅವಳು ಸಾವನ್ನಪ್ಪಿದ್ದಾಳೆ ಎಂದು ಹೇಳಿದಾಗ ಫಯಾದ್ ಇದು ಅಪಘಾತವಲ್ಲ ಇದೊಂದು ಒಳಸಂಚಾಗಿದೆ ಎಂದು ಫಯಾದ್ ತಿಳಿಸಿದರು ಎಂದು ಕ್ಲೇನ್ ಹೇಳಿದ್ದಾರೆ.

ಡಯಾನಾ ಮತ್ತು ದೋದಿ ಅವರ ಹತ್ಯೆಯಾಗಬಹುದೆಂದು ನೀವು ಹೇಗೆ ಉಹಿಸಿದ್ದೀರಿ ಎಂದು ಕ್ಲೇನ್ ಫಯಾದ್ ಅವರನ್ನು ಕೇಳಿದಾಗ ಡಯಾನಾ ತಮ್ಮ ಕೊಲೆಯಾಗಬಹುದೆನ್ನುವ ಭೀತಿಯನ್ನು ಕೆಲವೇ ದಿನಗಳ ಹಿಂದೆ ವ್ಯಕ್ತಪಡಿಸಿದ್ದರು ಎಂದು ಹೇಳಿದ್ದಾರೆ.

ಅಪಘಾತವಾಗುವ ವಾರದ ಹಿಂದೆ ತಾವು ಡಯನಾ ಅವರನ್ನು ವಿವಾಹವಾಗುವುದಾಗಿ ದೋಧಿ ತಮಗೆ ಹೇಳಿದ್ದರು ಎಂದು ಫಯಾದ್ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿದ್ದಾರೆ.
ಮತ್ತಷ್ಟು
2008ರ ಮಧ್ಯಭಾಗದಲ್ಲಿ ಪಡೆಗಳು ಹಿಂದಕ್ಕೆ-ರುಡ್
ಯುರೋಪಿಯನ್ ಪಡೆಗಳು ಹಿಂದಕ್ಕೆ:ಲಾಡೆನ್ ಒತ್ತಾಯ
ಡಿಸೆಂಬರ್ 16 ರಂದು ತುರ್ತುಪರಿಸ್ಥಿತಿ ಅಂತ್ಯ
ಡಿ.16ರಂದು ತುರ್ತುಪರಿಸ್ಥಿತಿ ತೆರವು
ಪಾಕ್ : ಸೈನಿಕ ದಾಳಿಗೆ 11 ನಾಗರಿಕರ ಹತ್ಯೆ
ಸೇನಾ ಮುಖ್ಯಸ್ಥರಾಗಿ ಕಯಾನಿ ಅಧಿಕಾರ ಸ್ವೀಕಾರ