ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ತುರ್ತುಪರಿಸ್ಥಿತಿ ಹಿಂದಕ್ಕೆ:ಅಮೆರಿಕ ಸ್ವಾಗತ
ಪಾಕಿಸ್ತಾನದ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಡಿಸೆಂಬರ್ 16ರಂದು ತುರ್ತುಪರಿಸ್ಥಿತಿ ಹಿಂದಕ್ಕೆ ತೆಗೆದುಕೊಳ್ಳುವ ನಿರ್ಧಾರ ಸ್ವಾಗತಾರ್ಹವಾದರೂ ಸಾಂವಿಧಾನಿಕ ಪ್ರಜಾಪ್ರಭುತ್ವ ಜಾರಿಗೆಗಾಗಿ ಇನ್ನಷ್ಟು ಕ್ರಮಗಳನ್ನು ಅನುಸರಿಸಬೇಕಾಗಿದೆ ಎಂದು ಅಮೆರಿಕ ಹೇಳಿದೆ.

ತುರ್ತುಪರಿಸ್ಥಿತಿ ಹಿಂತೆಗೆದುಕೊಳ್ಳುವ ಮೊದಲು ಪತ್ರಿಕೆಗಳಿಗೆ ವಿಧಿಸಿದ ನಿರ್ಭಂಧವನ್ನು ಹಿಂತೆಗೆದುಕೊಂಡು ಅಬಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ಮಾಡಿಕೊಡುವುದು ಅಗತ್ಯವಾಗಿದೆ ಎಂದು ಹೇಳಿದೆ.

ಪಾಕಿಸ್ತಾನದಲ್ಲಿ ಮುಷರಫ್ ತೆಗೆದುಕೊಂಡ ನಿರ್ಧಾರಗಳು ನಾಗರಿಕ ಸಮಾಜಕ್ಕೆ ಪೂರಕವಾಗಿದ್ದು,ಸ್ವಾಗತಾರ್ಹ ಹೆಜ್ಜೆಗಳಾಗಿವೆ. ಕೂಡಲೇ ಪತ್ರಿಕೆಗಳಿಗೆ, ಚಾನಲ್‌ಗಳಿಗೆ ವಿಧಿಸಿರುವ ನಿರ್ಭಂಧವನ್ನು ತುರ್ತುಪರಿಸ್ಥಿತಿ ಹಿಂತೆಗೆದುಕೊಳ್ಳುವ ಮುನ್ನ ಹಿಂತೆಗೆದುಕೊಳ್ಳಬೇಕಾಗಿದೆ ಎಂದು ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಹೇಳಿದ್ದಾರೆ ಎಂದು ವೈಟ್‌ಹೌಸ್ ವಕ್ತಾರ ಡಾನಾ ಪೆರಿನೋ ಹೇಳಿದ್ದಾರೆ.
ಮತ್ತಷ್ಟು
ಡಯಾನಾ ಕಾರು ಅಪಘಾತವಲ್ಲ, ಸಂಚು
2008ರ ಮಧ್ಯಭಾಗದಲ್ಲಿ ಪಡೆಗಳು ಹಿಂದಕ್ಕೆ-ರುಡ್
ಯುರೋಪಿಯನ್ ಪಡೆಗಳು ಹಿಂದಕ್ಕೆ:ಲಾಡೆನ್ ಒತ್ತಾಯ
ಡಿಸೆಂಬರ್ 16 ರಂದು ತುರ್ತುಪರಿಸ್ಥಿತಿ ಅಂತ್ಯ
ಡಿ.16ರಂದು ತುರ್ತುಪರಿಸ್ಥಿತಿ ತೆರವು
ಪಾಕ್ : ಸೈನಿಕ ದಾಳಿಗೆ 11 ನಾಗರಿಕರ ಹತ್ಯೆ