ಪಾಕಿಸ್ತಾನದ ರಾಷ್ಟ್ರಾಧ್ಯಕ್ಷ ಪರ್ವೇಜ್ ಮುಷರಫ್ ಅವರ ಉಪಯೋಗಕ್ಕಾಗಿ ಅತ್ಯಾಧುನಿಕ ಐಶಾರಾಮಿ 60 ಮಿಲಿಯನ್ ಪೌಂಡ್ ವೆಚ್ಚದ ವಿಮಾನವನ್ನು ಸಿದ್ದಪಡಿಸಲಾಗಿದೆ
10 ಆಸನಗಳ ವ್ಯವಸ್ಥೆ ಇರುವ ಐಶಾರಾಮಿ ವಿಮಾನವನ್ನು ಪಾಕಿಸ್ತಾನದ ಮಾಜಿ ಪ್ರಧಾನಿ ಶೌಕತ್ ಅಜೀಜ್ ತಮ್ಮ ಅಡಳಿತಾವಧಿಯಲ್ಲಿ ಒಪ್ಪಿಗೆ ಸೂಚಿಸಿದ್ದರು.
ಅಮೆರಿಕದ ಪೈಲಟ್‌ಗಳು ಕೆಲ ದಿನಗಳ ಹಿಂದೆ ಪಾಕಿಸ್ತಾನಕ್ಕೆ ವಿಮಾನವನ್ನು ತಂದಿದ್ದು ಪಾಕ್ ಪೈಲಟ್‌ಗಳಿಗೆ ತರಬೇತಿಯನ್ನು ನೀಡುತ್ತಿದ್ದಾರೆ.
ಇನ್ನು ಎರಡು ವಿಮಾನಗಳ ಖರೀದಿಗೆ ಆದೇಶ ನೀಡಿದ್ದು ಪಾಕ್‌ನಲ್ಲಿ ನಡೆಯಲಿರುವ ಚುನಾವಣೆಯ ನಂತರ ದೇಶಕ್ಕೆ ಆಗಮಿಸಲಿದ್ದು, ರಾಷ್ಟ್ರಾಧ್ಯಕ್ಷ ಮತ್ತು ಪ್ರಧಾನಿ ಅವರ ಖಾಸಗಿ ಉಪಯೋಗಕ್ಕಾಗಿ ಸೀಮಿತವಾಗಲಿವೆ.
|