ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಚುನಾವಣೆ ಬಹಿಷ್ಕಾರ: ವಿರೋಧಪಕ್ಷಗಳಲ್ಲಿ ಭಿನ್ನಮತ
ಮುಂಬರುವ ಜನವರಿ 8 ರಂದು ನಡೆಯಲಿರುವ ಚುನಾವಣೆಯಲ್ಲಿ ಭಾಗವಹಿಸಬೇಕೆ ಅಥವಾ ಬಹಿಷ್ಕರಿಸಬೇಕೆ ಎನ್ನುವ ಚರ್ಚೆಯಲ್ಲಿ ಪ್ರಮುಖ ವಿರೋಧ ಪಕ್ಷಗಳಲ್ಲಿ ಭಿನ್ನಮತ ಎದುರಾಗಿದೆ

ಪಾಕಿಸ್ತಾನದ ಅಧ್ಯಕ್ಷರಾಗಿ ಮುಷರಫ್ ಅವರು ಎರಡನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ ನಂತರವಿರೋಧಪಕ್ಷಗಳು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಪುನರ್‌ನೇಮಕವಾಗುವವರೆಗೂ ಚುನಾವಣೆಯಲ್ಲಿ ಭಾಗವಹಿಸಬಾರದು ಎಂದು ಹೇಳಿಕೆ ನೀಡಿದ್ದವು.

ಆದರೆ ಪಾಕಿಸ್ತಾನ ಪೀಪಲ್ಸ್ ಪಕ್ಷದ ಅಧ್ಯಕ್ಷೆ ಬೆನ್‌ಜಿರ್ ಭುಟ್ಟೋ ಚುನಾವಣೆ ಬಹಿಷ್ಕರಿಸುವುದರಿಂದ ಯಾವುದೇ ಪ್ರಯೋಜನವಿಲ್ಲವಾದ್ದರಿಂದ ಚುನಾವಣೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದರು.

ನ್ಯಾಯಾಧೀಶರ ಮರುನಿಯುಕ್ತಿ ಕುರಿತಂತೆ ಮಾಜಿ ಪ್ರಧಾನಿಗಳಾದ ಬೆನ್‌ಜಿರ್ ಭುಟ್ಟೋ ಮತ್ತು ನವಾಜ್ ಷರೀಫ್ ಅವರು ಕೂಡಾ ಸೂಕ್ತ ಒಮ್ಮತ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.
ಮತ್ತಷ್ಟು
ಮುಷರಫ್‌ಗೆ ಐಶಾರಾಮಿ ವಿಮಾನ
ವಿಶ್ವಪ್ರವಾಸಿ ಸಂಸ್ಥೆಗೆ ಭಾರತದ ಮುಖಂಡತ್ವ
ತುರ್ತುಪರಿಸ್ಥಿತಿ ಹಿಂದಕ್ಕೆ:ಅಮೆರಿಕ ಸ್ವಾಗತ
ಡಯಾನಾ ಕಾರು ಅಪಘಾತವಲ್ಲ, ಸಂಚು
2008ರ ಮಧ್ಯಭಾಗದಲ್ಲಿ ಪಡೆಗಳು ಹಿಂದಕ್ಕೆ-ರುಡ್
ಯುರೋಪಿಯನ್ ಪಡೆಗಳು ಹಿಂದಕ್ಕೆ:ಲಾಡೆನ್ ಒತ್ತಾಯ