ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಕೆರೆಬಿಯನ್ ದ್ವೀಪದಲ್ಲಿ ಭಾರಿ ಭೂಕಂಪ
ಪೂರ್ವಿಯ ಕೆರೆಬಿಯನ್‌ ಪ್ರದೇಶದಲ್ಲಿ ಇಂದು ಶಕ್ತಿಶಾಲಿ ಭೂಕಂಪ ಸಂಭವಿಸಿದಾಗ ಕಟ್ಟಡಗಳಿಗೆ ಹಾನಿಯಾಗಿದ್ದು, ಭೂಕಂಪದಿಂದಾಗಿ ಬೆದರಿದ ಜನತೆ ಕಟ್ಟಡಗಳ ಮೇಲಿಂದ ಧುಮುಕಿದಾಗ ಹಲವಾರು ಮಂದಿಗೆ ಗಾಯಗಳಾಗಿವೆ.

ಮಾಪಕದಲ್ಲಿ ಭೂಕಂಪ ತೀವ್ರತೆ 7.4 ರಷ್ಟಿದ್ದು, 23 ಕಿ.ಮಿ.ದೂರದ ಆಗ್ನೆಯ ಭಾಗದಲ್ಲಿರುವ ಮಾರ್ಟಿನ್ಕ್ಯೂಕರಾವಳಿ ತೀರದಲ್ಲಿ ಕೇಂದ್ರಿಕೃತವಾಗಿದೆ ಎಂದು ತಿಳಿಸಿದೆ.

ಭೂಕಂಪದಿಂದಾಗಿ ಅನೇಕ ಕಟ್ಟಡಗಳಿಗೆ ಹಾನಿಯಾಗಿದ್ದು, ಸಾವುನೋವಿನ ಕುರಿತು ಇಲ್ಲಿಯವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲವೆಂದು ಜಿಲ್ಲಾಡಳಿತ ಹೇಳಿದೆ.

ಫೆಸಿಫಿಕ್‌ನ ತ್ಸುನಾಮಿ ಕೇಂದ್ರವಾದ ಹವಾಯಿನಲ್ಲಿ ಭೂಕಂಪ ಸಾಗರದಾಳದಲ್ಲಿದ್ದು,ತ್ಸುನಾಮಿ ಸಂಭವಿಸುವ ಸಾಧ್ಯತೆಗಳನ್ನುತಳ್ಳಿ ಹಾಕುವಂತಿಲ್ಲ ಎಂದು ಮಾಹಿತಿ ನೀಡಿದೆ.

ಮಾರ್ಟಿನ್ಕ್ಯೂ ಪ್ರದೇಶದಲ್ಲಿ ಪೊಲೀಸ್ ಪಡೆಗಳು ಹಾಗೂ ಅಗ್ನಿಶಾಮಕ ದಳದವರು ಜನತೆಯ ಸಹಾಯಕ್ಕಾಗಿ ಧಾವಿಸಿದ್ದು ಜನರಿಗೆ ಅಲ್ಪ ಗಾಯಗಳಾದ ವರದಿಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕಂಪದ ಭಯದಿಂದಾಗಿ ಒಬ್ಬ ಬ್ರಿಟಿಷ್ ನಾಗರಿಕನು ಹೃದಯಘಾತದಿಂದ ಸಾವನ್ನಪ್ಪಿದ್ದಾನೆ . ದ್ವೀಪದ ಸುಮಾರು 31 ಸಾವಿರ ಮಂದಿ ವಿದ್ಯುತ್ ಕೊರತೆಯಿಂದ ಬಳಲುತ್ತಿದ್ದು ಭೂಕಂಪದ ಭಯದಿಂದಾಗಿ ಮನೆಯಲ್ಲಿರದೇ ಹೊರ ಆವರಣದಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ದ್ವೀಪದ ನಾಗರಿಕ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ
ಮತ್ತಷ್ಟು
ಚುನಾವಣೆ ಬಹಿಷ್ಕಾರ: ವಿರೋಧಪಕ್ಷಗಳಲ್ಲಿ ಭಿನ್ನಮತ
ಮುಷರಫ್‌ಗೆ ಐಶಾರಾಮಿ ವಿಮಾನ
ವಿಶ್ವಪ್ರವಾಸಿ ಸಂಸ್ಥೆಗೆ ಭಾರತದ ಮುಖಂಡತ್ವ
ತುರ್ತುಪರಿಸ್ಥಿತಿ ಹಿಂದಕ್ಕೆ:ಅಮೆರಿಕ ಸ್ವಾಗತ
ಡಯಾನಾ ಕಾರು ಅಪಘಾತವಲ್ಲ, ಸಂಚು
2008ರ ಮಧ್ಯಭಾಗದಲ್ಲಿ ಪಡೆಗಳು ಹಿಂದಕ್ಕೆ-ರುಡ್