ಮಾಜಿ ಪ್ರಧಾನಿ ಭುಟ್ಟೋ ಅವರ ಜೊತೆ ಮುಂಬರುವ ಚುನಾವಣೆ ಕುರಿತಂತೆ ಯಾವುದೇ ಹೊಂದಾಣಿಕೆ ಒಪ್ಪಂದಕ್ಕೆ ಪ್ರಯತ್ನಿಸಿಲ್ಲ ಎಂದು ಪಾಕ್ ಅಧ್ಯಕ್ಷ ಪರ್ವೇಜ್ ಮುಷರಫ್ ತಿಳಿಸಿದ್ದಾರೆ.
ಪಾಕಿಸ್ತಾನ ಭಯೋತ್ಪಾದನೆ ವಿರುದ್ದ ಹೋರಾಟ ನಡೆಸುತ್ತಿದ್ದು, ಭಯೋತ್ಪಾದನೆ ನಿಗ್ರಹದಲ್ಲಿ ವಿಫಲವಾಗಿದೆ ಎನ್ನುವ ಆರೋಪಗಳು ಸರಿಯಲ್ಲ ಎಂದು ಸೇನಾ ಸಮವಸ್ತ್ರವನ್ನು ಕಳಚಿ ನಾಗರಿಕ ಅಧ್ಯಕ್ಷರಾಗಿ ಆಯ್ಕೆಯಾದ ಮುಷರಫ್ ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಭುಟ್ಟೋ ಅವರ ಜೊತೆಯಾಗಲಿ ಇನ್ನಿತರರ ಜೊತೆಯಾಗಲಿ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಮುಷರಫ್ ಸ್ಪಷ್ಟಪಡಿಸಿದರು.
ಪ್ರಸ್ತುತ ಪಾಕಿಸ್ತಾನದಲ್ಲಿ ಉತ್ತಮ ವಾತಾವರಣವಿದ್ದು ಮುಕ್ತ ಮತ್ತು ಪಾರದರ್ಶಕ ಚುನಾವಣೆಗೆ ಸನ್ನದ್ಧವಾಗಿದೆ.ಚುನಾವಣೆಯ ನಂತರ ದೇಶದಲ್ಲಿ ನನಗೆ ಸ್ವೀಕೃತವಾಗದ ಬೆಳವಣಿಗೆಗಳಾದಲ್ಲಿ ನಾನು ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುವ ಅವಕಾಶಗಳನ್ನು ಕಾಯ್ದಿರಿಸಿಕೊಂಡಿದ್ದೆನೆ ಎಂದರು.
ಕಳೆದ ಐದು ವರ್ಷಗಳಿಂದ ನಿರಂತರವಾಗಿ ಸರಕಾರವನ್ನು ಅಸ್ಥಿರಗೊಳಿಸುವ ವಿರೋಧ ಪಕ್ಷಗಳ ಸಂಚನ್ನು ವಿಫಲಗೊಳಿಸಲು ದೇಶದಲ್ಲಿ ತುರ್ತುಪರಿಸ್ಥಿತಿಯನ್ನು ಜಾರಿಗೆ ತರಲಾಯಿತು ಎಂದು ಸಮರ್ಥಿಸಿಕೊಂಡರು
|