ದೇಶದಲ್ಲಿ ಅಲ್ಪ ಸಂಖ್ಯಾತರಾದ ತಮಿಳರ ಮೇಲೆ ಆಗುತ್ತಿರುವ ದೌರ್ಜನ್ಯ ಕುರಿತಂತೆ ಭಾರತ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ದೇಶದ ಆಂತರಿಕ ವಿಷಯಗಳಲ್ಲಿ ಭಾರತ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಮಲೇಷಿಯಾ ಕಿಡಿಕಾರಿದೆ.
10 ಸಾವಿರ ಸಂಖ್ಯೆಯಲ್ಲಿರುವ ತಮಿಳರು ಸಮಾನತೆ ಮತ್ತು ಸ್ಪಂದನೆ ನೀಡುವಂತೆ ಸರಕಾರವನ್ನು ಒತ್ತಾಯಿಸಿ ನಿಷೇಧಿತ ಮೆರವಣಿಗೆಯಲ್ಲಿ ಭಾಗವಹಿಸಿದ್ದರಿಂದ ಅದನ್ನು ತಡೆಯಲು ಪೊಲೀಸರು ಟಿಯರ್ ಗ್ಯಾಸ್ ಮತ್ತು ಜಲದಾಳಿ ನಡೆಸಿದ್ದರು.
ಮಲೇಷಿಯಾದ 27 ಮಿಲಿಯನ್ ಜನಸಂಖ್ಯೆಯಲ್ಲಿ ಶೇ 8 ರಷ್ಟಿರುವ ತಮಿಳರು ಮಲೇಯಾಳಿ ಮತ್ತು ಚೀನಾದ ನಂತರ ಮೂರನೇಯ ಸ್ಥಾನದಲ್ಲಿದ್ದಾರೆ. ದೇಶದ ಸಂವಿಧಾನದಂತೆ ನಾಗರಿಕರೊಂದಿಗೆ ವ್ಯವಹರಿಸಲಾಗುವುದು. ಇತರ ದೇಶಗಳು ದೇಶದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದು ಸೂಕ್ತವಲ್ಲ ಎಂದು ವಿದೇಶಾಂಗ ಸಚಿವ ಸಯ್ಯದ್ ಹಮೀದ್ ಅಲ್ಬರ್ ಹೇಳಿದ್ದಾರೆ.
ಭಾರತ ವಿದೇಶಾಂಗ ಸಚಿವ ಪ್ರಣಭ ಮುಖರ್ಜಿ ಭಾರತೀಯರ ಮೇಲಾಗುತ್ತಿರುವ ದಬ್ಬಾಳಿಕೆ ಕುರಿತು ಕಳವಳ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮಲೇಷಿಯಾದಲ್ಲಿ ಭಾರತೀಯರು ಕಾನೂನು ಕೈಗೆತ್ತಿಕೊಂಡಲ್ಲಿ ಮಲೇಷಿಯಾ ದೇಶದ ಸಂವಿಧಾನದಂತೆ ಶಿಕ್ಷಿಸಲಾಗುವುದು ಎಂದು ಸಚಿವ ಹಮೀದ್ ಹೇಳಿದ್ದಾರೆ.
|