ಇಂಡೋನೇಷಿಯಾ ದೇಶದ ಆಸಿಹ ಪ್ರಾಂತ್ಯದಲ್ಲಿ ಇಂದು ಮುಂಜಾನೆ ಭೂಕಂಪವಾಗಿದ್ದು ರಿಕ್ಟರ್ ಮಾಪಕದಲ್ಲಿ 6,3 ರಷ್ಟು ತೀವ್ರತೆ ದಾಖಲಾಗಿದೆ.ಆದರೆ ಯಾವುದೇ ಸಾವು ನೋವುಗಳಾದ ಘಟನೆಗಳ ವರದಿಗಳು ಲಭ್ಯವಾಗಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪದ ಕೇಂದ್ರಬಿಂದು 33 ಕಿ.ಮಿ. ದೂರದ ದಕ್ಷಿಣ ಭಾಗದ ಸಿಂಗ್‌ಕಿಲ್ಬರುವಿನಲ್ಲಿದ್ದು 18 ಕಿ.ಮಿ.ಸಮುದ್ರದಲ್ಲಿ ಆಳವಾಗಿದೆ. ಆದರೆ ಸುನಾಮಿ ಎದುರಾಗುವ ಸಾಧ್ಯತೆಗಳಿಲ್ಲ ಎಂದು ಭೂಗರ್ಭ ಇಲಾಖೆ ವಿಜ್ಞಾನಿಗಳು ತಿಳಿಸಿದ್ದಾರೆ.
ಪಶ್ಚಿಮ ಸುಮಾತ್ರ ಸೇರಿದಂತೆ ಅಸಿಹ್ ಹಾಗೂ ನಿಯಾಸ್ ದ್ವೀಪಗಳಲ್ಲಿ ಭೂಕಂಪದ ಪರಿಣಾಮವಾಗಿದೆ ಆದರೆ ಇಲ್ಲಿಯವರೆಗೆ ಯಾವುದೇ ಸಾವುನೋವುಗಳಾದ ಘಟನೆ ವರದಿಯಾಗಿಲ್ಲವೆಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.
ಇಂಡೋನೇಷಿಯಾ ಸೆಸಿಮಿಕ್ ರೇಖೆಯಲ್ಲಿರುವುದರಿಂದ ಭೂಕಂಪದ ತೀವ್ರತೆಗಳು ಹೆಚ್ಚಾಗುತ್ತವೆ ಎಂದು ಭೂಗರ್ಭ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
|