ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
"ಗೌರವ"ಕ್ಕಾಗಿ ವಾರ್ಷಿಕ 1 ಸಾವಿರ ಮಹಿಳೆಯರ ಹತ್ಯೆ
ಪಾಕಿಸ್ತಾನದಲ್ಲಿ ಕುಟುಂಬ ಪ್ರತಿಷ್ಟೆಗಾಗಿ ಒಂದು ಸಾವಿರ ಮಹಿಳೆಯರನ್ನು ಹತ್ಯೆ ಮಾಡಲಾಗುತ್ತಿದೆ ಎಂದು ಮಹಿಳಾ ಅಭಿವೃದ್ಧಿ ಸಚಿವಾಲಯ ತಿಳಿಸಿದೆ.

ಮಹಿಳೆಯರನ್ನು ಬೆಂಕಿ ಹಚ್ಚಿ ಕೊಲ್ಲುವುದಲ್ಲದೇ, ಅತ್ಯಾಚಾರವೆಸಗುವುದಲ್ಲದೇ ಸಾಯುವವರೆಗೂ ಹೊಡೆಯುವುದು ಸೇರಿದಂತೆ ಅನೇಕ ರೀತಿಯ ಪ್ರಕರಣಗಳು ವರದಿಯಾಗಿವೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ಮಹಿಳೆಯರ ಮೇಲೆ ನಡೆದ ದೌರ್ಜನ್ಯಗಳು ಪೊಲೀಸ್ ಠಾಣೆಯಲ್ಲಿ ಅನೇಕ ಪ್ರಕರಣಗಳು ದಾಖಲಾಗದೆ ಮುಚ್ಚಿಹೋಗಿವೆ ಎಂದು ಸೇವಾ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.

ಜಗತ್ತಿನ ಎಲ್ಲ ರಾಷ್ಟ್ರಗಳಿಗಿಂತ ಪಾಕಿಸ್ತಾನದಲ್ಲಿ ಮಹಿಳೆಯರ ಮೇಲೆ ಹೆಚ್ಚಿನ ರೀತಿಯಲ್ಲಿ ದೌರ್ಜನ್ಯ ಪ್ರಕರಣಗಳು ನಡೆಯುತ್ತವೆ ಎಂದು ಮಹಿಳಾ ಪರ ಸಂಘಟನೆಗಳು ಆರೋಪಿಸಿವೆ.

ವತ್ತಾ-ವತ್ತಾ ಎನ್ನುವ ಬುಡಕಟ್ಟು ಪದ್ದತಿಯಲ್ಲಿ ವಧುವನ್ನು ಸಂಬಂಧಿಕರಲ್ಲಿ ಬಲವಂತವಾಗಿ ಬದಲಾಯಿಸಲಾಗುತ್ತದೆ.ಇಲ್ಲವಾದಲ್ಲಿ ಹಿಂಸೆಗೆ ಗುರಿಯಾಗಿ ಸಾವಿಗೀಡಾಗಬೇಕಾಗುತ್ತದೆ.

ವಣಿ- ಸ್ವರ ಬುಡಕಟ್ಟು ಜನಾಂಗದವರಲ್ಲಿ ಯಾವುದೇ ವ್ಯಕ್ತಿ ಅಪರಾಧದಲ್ಲಿ ತೊಡಗಿದಲ್ಲಿ ಆತನ ಮನೆಯ ಮಹಿಳೆಯರು ಆತನ ಕೃತ್ಯಕ್ಕೆ ಬಲಿಯಾದವರ ಸಂಬಂಧಿಕರಲ್ಲಿ ಮದುವೆಯಾಗಬೇಕಾಗುತ್ತದೆ.
ಮತ್ತಷ್ಟು
ಸೇನಾ ಕಾರ್ಯಾಚರಣೆ :13 ಉಗ್ರರ ಸಾವು
ಇಂಡೋನೇಷಿಯಾದಲ್ಲಿ ಭೂಕಂಪ
ಮಾಜಿ ಪ್ರಧಾನಿ ಜಾನ್ ಹೋವಾರ್ಡ್‌ಗೆ ಸೋಲು
ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಬೇಡ- ಮಲೇಷಿಯಾ
ಭುಟ್ಟೋ ಜೊತೆ ಯಾವುದೇ ಒಪ್ಪಂದವಿಲ್ಲ-ಮುಷರಫ್
ಟರ್ಕಿ ವಿಮಾನಾಪಘಾತ: 56 ಮಂದಿ ಸಾವು