ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಹಜ್ ಯಾತ್ರಿಕರಿಗೆ ಸೌದಿ ಆದೇಶ
ಡಿಸೆಂಬರ್ 18 ರಂದು ನಡೆಯಲಿರುವ ಹಜ್‌ ಸಂದರ್ಭದಲ್ಲಿ ಯಾತ್ರಿಕರು ಇತರರಿಗೆ ತೊಂದರೆಯಾಗದಂತೆ ಆದೇಶಗಳನ್ನು ಪಾಲಿಸಬೇಕೆಂದು ಮನವಿ ಮಾಡಿದೆ.

ಮೆಕ್ಕಾ ಮತ್ತು ಮದೀನಾದಲ್ಲಿ ರಸ್ತೆ ತಡೆ, ಬಡಿದಾಟ ಮತ್ತು ಪ್ರತಿಸ್ಪರ್ಧೆಗಳಲ್ಲಿ ಯಾತ್ರಿಕರು ತೊಡಗಬಾರದು. ಇದರಿಂದ ಪವಿತ್ರ ಹಜ್‌ಗೆ ತೊಂದರೆ ನೀಡಿದಂತಾಗುತ್ತದೆ ಎಂದು ಮೆಕ್ಕಾ ಮಸೀದಿಯ ಮುಖ್ಯ ಮೌಲ್ವಿ ಶೇಖ್-ಸೌದ್-ಅಲ್-ಶುರೈಮ್ ತಿಳಿಸಿದ್ದಾರೆ

ಜಗತ್ತಿನ ಸುಮಾರು ಐದು ಲಕ್ಷಕ್ಕೂ ಹೆಚ್ಚಿನ ಜನರು ಹಜ್‌ ಯಾತ್ರೆಗೆ ಈಗಾಗಲೇ ಆಗಮಿಸಿದ್ದು,25 ಲಕ್ಷ ಯಾತ್ರಿಕರು ಆಗಮಿಸುವ ನಿರೀಕ್ಷೆ ಇದೆ ಎಂದು ಮಸೀದಿಯ ಅಡಳಿತ ಮಂಡಳಿ ತಿಳಿಸಿದೆ.

ಈಗಾಗಲೇ 60,429 ಭಾರತೀಯ ಯಾತ್ರಿಕರು ಆಗಮಿಸಿದ್ದು,51,122 ಯಾತ್ರಿಕರು ಮೆಕ್ಕಾದಲ್ಲಿದ್ದು,ಉಳಿದ 9,293 ಮಂದಿ ಯಾತ್ರಿಕರು ಮದೀನಾದಲ್ಲಿದ್ದಾರೆ.ಅಂದಾಜು 157,000 ಭಾರತೀಯ ಯಾತ್ರಿಕರು ಭೇಟಿ ನೀಡುವ ನಿರೀಕ್ಷೆ ಇದೆ ಎಂದು ದುಬೈನಲ್ಲಿರುವ ಭಾರತೀಯ ರಾಯಭಾರಿ ಔಸಫ್ ಸಯ್ಯದ್ ಹೇಳಿದ್ದಾರೆ.




ಮತ್ತಷ್ಟು
"ಗೌರವ"ಕ್ಕಾಗಿ ವಾರ್ಷಿಕ 1 ಸಾವಿರ ಮಹಿಳೆಯರ ಹತ್ಯೆ
ಸೇನಾ ಕಾರ್ಯಾಚರಣೆ :13 ಉಗ್ರರ ಸಾವು
ಇಂಡೋನೇಷಿಯಾದಲ್ಲಿ ಭೂಕಂಪ
ಮಾಜಿ ಪ್ರಧಾನಿ ಜಾನ್ ಹೋವಾರ್ಡ್‌ಗೆ ಸೋಲು
ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಬೇಡ- ಮಲೇಷಿಯಾ
ಭುಟ್ಟೋ ಜೊತೆ ಯಾವುದೇ ಒಪ್ಪಂದವಿಲ್ಲ-ಮುಷರಫ್