ಮುಂಬರುವ ಜನೆವರಿ 8 ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಮಾಜಿ ಪ್ರಧಾನಿ ನವಾಜ್ ಷರೀಫ್ ಸಹೋದರ್ ಶಾಹಬಾಜ್ ಷರೀಫ್ ಅವರ ನಾಮಪತ್ರ ತಿರಸ್ಕ್ರತಗೊಂಡಿದೆ.
1998ರಲ್ಲಿ ಶಾಹಬಾಜ್ ಪಂಜಾಬ್ ಮುಖ್ಯಮಂತ್ರಿಯಾಗಿದ್ದಾಗ ಐವರು ವಿದ್ಯಾರ್ಥಿಗಳ ಹತ್ಯೆಯ ಆರೋಪವಿರುವುದರಿಂದ ರಾಷ್ಟ್ರೀಯ ಮತ್ತು ಪ್ರಾಂತೀಯ ಚುನಾವಣೆಗಳಿಗೆ ಸಲ್ಲಿಸಿದ್ದ ನಾಮಪತ್ರ ತಿರಸ್ಕರಿಸಲಾಗಿದೆ. ಆದರೆ ಆರೋಪದಲ್ಲಿ ಯಾವುದೇ ಸತ್ಯವಿಲ್ಲ ಎಂದು ಶಾಹಬಾಜ್ ಪರ ವಕೀಲ ಇಮ್ತಿಯಾಜ್ ಕೈಫಿ ಹೇಳಿದ್ದಾರೆ.
ಶಾಹಬಾಜ್ ಕೊಲೆ ಪ್ರಕರಣದಲ್ಲಿ, ಸಾಲವನ್ನು ಹಿಂತಿರುಗಿಸದ, ನ್ಯಾಯಾಲಯ ಆದೇಶ ಉಲ್ಲಂಘನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಮೂರು ಮಂದಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದಾರೆ.
ಜನೆವರಿ 2001ರಲ್ಲಿ ಪಾಕ್‌ನ ಸಬ್ಜಾ ಜರಾ ಪ್ರದೇಶದಲ್ಲಿ ಐವರು ವಿದ್ಯಾರ್ಥಿಗಳು ಹತ್ಯೆಯಾದಾಗ ಮೃತರ ತಂದೆ ಶಾಹಬಾಜ್ ವಿರುದ್ದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
|