ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಆಸ್ಟ್ರೇಲಿಯಾದ ಪ್ರಧಾನಿಯಾಗಿ ರುಡ್
ಲೇಬರ್ ಪಕ್ಷದ ನಾಯಕ ಕೇವಿನ್ ರುಡ್ ಇಂದು ಅಧಿಕೃತವಾಗಿ 26 ನೇಯ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಕ್ಯಾನ್‌ಬೆರ್ರಾದ ರಾಜ್ಯಪಾಲ ಜನರಲ್ ಮಿಖೈಲ್ ಜೆಫ್ರಿ ಅವರ ಸಮ್ಮುಖದಲ್ಲಿ ರುಡ್ ಪ್ರಧಾನಿಯಾಗಿ ಹಾಗೂ ಉಪಪ್ರಧಾನಿಯಾಗಿ ಜೂಲಿಯಾ ಗಿಲ್ಲರ್ಡ್ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಈ ಸಮಾರಂಭದಲ್ಲಿ ಕೆವಿನ್ ರುಡ್ ಅವರ ಪತ್ನಿ ಥೆರೆಸಾ ರೈನ್ ಹಾಗೂ ಮಕ್ಕಳು ಮತ್ತು ಗಿಲ್ಲರ್ಡ್ ಅವರ ಗೆಳತಿ ಟಿಮ್ ಮತ್ತು ಅವಳ ಸಹೋದರಿ ಅಲಿಸಾನ್ ಅವರು ಪಾಲ್ಗೊಳ್ಳಲಿದ್ದಾರೆ.

ರುಡ್ ಪ್ರಧಾನಿಯಾಗಿ ಹಾಗೂ ಉಪಪ್ರಧಾನಿಯಾಗಿ ಜೂಲಿಯಾ ಗಿಲ್ಲರ್ಡ್ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ಸಂಪುಟದ ಸಚಿವರುಗಳ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಕೈಗಾರಿಕೆ ಮತ್ತು ಶೈಕ್ಷಣಿಕ ಸಂಭಂಧಿಸ ಸಮಸ್ಯೆಗಳನ್ನು ಮುಂಬರುವ ಕ್ರಿಸಮಸ್ ಒಳಗಾಗಿ ಬಗೆಹರಿಸಲು ಸಂಪುಟಸಭೆಯನ್ನು ಶೀಘ್ರದಲ್ಲಿ ಕರೆಯಲು ನಿರ್ಧರಿಸಿದ್ದಾರೆ.

ಕ್ಯಾನ್‌ಬೆರ್ರಾದ ಹೊರಗೆ ನಿಯಮಿತವಾಗಿ ಸಂಪುಟ ಸಭೆಗಳನ್ನು ನಡೆಸಲು ಕೆವಿನ್ ರುಡ್ ಅಶ್ವಾಸನೆ ನೀಡಿದ್ದಾರೆ.11ವರೆ ವರ್ಷಗಳ ನಂತರ ಲೇಬರ್ ಪಕ್ಷ ಅಧಿಕಾರಕ್ಕೆ ಬಂದಿರುವುದರಿಂದ ಇಂದು ಮಹತ್ವದ ದಿನವಾಗಿದೆ ಎಂದು ರುಡ್ ಸಂತಸ ವ್ಯಕ್ತಪಡಿಸಿದ್ದಾರೆ.


ಮತ್ತಷ್ಟು
ಶ್ರೀಲಂಕಾ: ಗುಂಡಿನ ಚಕಮಕಿಯಲ್ಲಿ 27 ಸಾವು
ಅಫಘಾನಿಸ್ಥಾನದಲ್ಲಿ 2010ರವರೆಗೆ ಡಚ್ ಪಡೆಗಳು
ಷರೀಫ್ ಸಹೋದರ ನಾಮಪತ್ರ ತಿರಸ್ಕ್ರತ
ಹಜ್ ಯಾತ್ರಿಕರಿಗೆ ಸೌದಿ ಆದೇಶ
"ಗೌರವ"ಕ್ಕಾಗಿ ವಾರ್ಷಿಕ 1 ಸಾವಿರ ಮಹಿಳೆಯರ ಹತ್ಯೆ
ಸೇನಾ ಕಾರ್ಯಾಚರಣೆ :13 ಉಗ್ರರ ಸಾವು