ಉತ್ತರ ಶ್ರೀಲಂಕಾದಲ್ಲಿ ಶಂಕಿತ ಉಗ್ರಗಾಮಿಯನ್ನು ಸೇನೆ ಸುತ್ತುವರಿದ ಹಿನ್ನೆಲೆಯಲ್ಲಿ ತನ್ನನ್ನು ತಾನು ಸ್ಪೋಟಿಸಿಕೊಂಡ ನಂತರ ಸೇನೆಯ ಮತ್ತು ಉಗ್ರರ ಮಧ್ಯ ನಡೆದ ಘರ್ಷಣೆಯಲ್ಲಿ 37 ಉಗ್ರರು ಸಾವನ್ನಪ್ಪಿದ್ದಾರೆ.
ಮನ್ನಾರ್‌ನ ಅಡಪಂ ಬಳಿ ಸೇನಾಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ 37 ಉಗ್ರರು ಸಾವನ್ನಪ್ಪಿದ್ದು,ಹಲವಾರು ಉಗ್ರರು ಗಾಯಗೊಂಡಿದ್ದಾರೆಂದು ರಾಷ್ಟ್ರೀಯ ಭದ್ರತೆಯ ಕೇಂದ್ರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಜಾಫ್ನಾದ ಮುಹಾಮಲೈನ ಗಡಿರೇಖೆ ಬಳಿ ರಕ್ಷಣಾಪಡೆಗಳೊಂದಿಗೆ ನಡೆದ ಘರ್ಷಣೆಯಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದು ಉಗ್ರರ ಬಂಕರಗಳನ್ನು ನಾಶಪಡಿಸಲಾಗಿದೆ ಎಂದು ಸೇನಾಪಡೆಗಳ ವಕ್ತಾರರು ತಿಳಿಸಿದ್ದಾರೆ.
ತನ್ನನ್ನು ತಾನು ಸ್ಪೋಟಿಸಿಕೊಂಡ ಆತ್ಮಹತ್ಯಾ ದಳದ ಸದಸ್ಯನನ್ನು ತುಮಪಲೈನ ದರಾನಿ(19) ಎಂದು ಗುರುತಿಸಲಾಗಿದ್ದು ಸ್ಥಳದಲ್ಲಿ ಆತ್ಮಹತ್ಯೆ ಬೆಲ್ಟ್ ಹಾಗೂ ಹ್ಯಾಂಡ್ ಗ್ರೆನೆಡ್‌ಗಳನ್ನು ದೊರೆತಿದ್ದು ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿದ್ದಾರೆ.
|