ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಹಸೀನಾಗೆ ನ್ಯಾಯಾಲಯಕ್ಕೆ ಹಾಜರಾಗಲು ಆದೇಶ
ಅವಾಮಿ ಲೀಗ್ ಮುಖ್ಯಸ್ಥೆ ಹಾಗೂ ಮಾಜಿ ಪ್ರಧಾನಿ ಶೇಖ್ ಹಸೀನಾ ಮೂರು ಕೋಟಿ ಟಾಕಾ ಹಗರಣದ ಅಂತಿಮವಾಗಿ ವಿಚಾರಣೆಗೆ ಬಂದಿದ್ದು,ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.

ಭ್ರಷ್ಟಾಚಾರದ ಹಗರಣದಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಸೇರಿದಂತೆ ಇನ್ನಿಬ್ಬರು ಆರೋಪಿಗಳಾದ ಶೇಖ್ ರೆಹನಾ ಮತ್ತು ಆರೋಗ್ಯ ಸಚಿವ ಶೇಖ್ ಫಜಲ್ ಕರೀಮ್ ಸಲೀಮ್ ಅವರುಗಳನ್ನು ನ್ಯಾಯಾಲಯಕ್ಕೆ ಹಾಜರಾಗುವಂತೆ ಜಿಲ್ಲಾ ನ್ಯಾಯಾಧೀಶರು ಆದೇಶಿಸಿದ್ದಾರೆ.

ಮಾಜಿ ಪ್ರಧಾನಿ ಹಸೀನಾ ನ್ಯಾಯಾಲಯಕ್ಕೆ ಹಾಜರಾಗುತ್ತಿರುವುದರಿಂದ ಸಂಸತ್ತಿನ ಕಟ್ಟಡದಲ್ಲಿ ನ್ಯಾಯಾಲಯದ ವಿಚಾರಣೆ ನಡೆಯಲಿದೆ.

ಬಾಂಗ್ಲಾದೇಶದ ಉದ್ಯಮಿ ಅಜಮ್ ಜಹಾಂಗೀರ್ ಚೌಧರಿ ತಮ್ಮನ್ನು ಮಾಜಿ ಪ್ರಧಾನಿ ವಂಚಿಸಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದರಿಂದ ಪೊಲೀಸರು ಮಾಜಿ ಪ್ರಧಾನಿ ಹಸೀನಾ , ರೆಹನಾ, ಸಲೀಮ್ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮಾಜಿ ಪ್ರಧಾನಿ ಶೇಖ್ ಹಸೀನಾ ಇನ್ನಿಬ್ಬರು ಆರೋಪಿಗಳಾದ ಶೇಖ್ ರೆಹನಾ ಮತ್ತು ಆರೋಗ್ಯ ಸಚಿವ ಶೇಖ್ ಫಜಲ್ ಕರೀಮ್ ಸಲೀಮ್ ವಿದ್ಯುತ್ ಘಟಕ ನಿರ್ಮಾಣಕ್ಕಾಗಿ 2.99 ಕೋಟಿ ರೂ.ಲಂಚ ನೀಡುವಂತೆ ಒತ್ತಾಯಿಸಿದ್ದರು ಎಂದು ಆರೋಪಿಸಿದ್ದಾರೆ.
ಮತ್ತಷ್ಟು
ಹಿಂಸಾಚಾರ : 37 ಉಗ್ರರ ಸಾವು
ಪುಟಿನ್ ನೇತ್ರತ್ವದ ಪಕ್ಷಕ್ಕೆ ಜಯಭೇರಿ
ಚುನಾವಣೆ : ಭುಟ್ಟೋ ಷರೀಫ್ ಮಾತುಕತೆ
ಅಣುಘಟಕಗಳು ಸುರಕ್ಷಿತ: ಪಾಕ್
ಆಸ್ಟ್ರೇಲಿಯಾದ ಪ್ರಧಾನಿಯಾಗಿ ರುಡ್
ಶ್ರೀಲಂಕಾ: ಗುಂಡಿನ ಚಕಮಕಿಯಲ್ಲಿ 27 ಸಾವು