ಇರಾಕ್ ಉಗ್ರರ ವಿರುದ್ದ ನಡೆದ ಕಾರ್ಯಾಚರಣೆಯಲ್ಲಿ ಇರಾಕಿ ಸೇನಾಪಡೆಗಳು 13 ಉಗ್ರರನ್ನು ಹತ್ಯೆ ಮಾಡಿದ್ದಲ್ಲದೇ 94 ಮಂದಿಯನ್ನು ಬಂಧಿಸಿದ್ದಾರೆ.
ಕಿರ್ಕುಕ್ ಮತ್ತು ದಿಯಾಲಾ ಪ್ರಾಂತ್ಯದಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಇರಾಕಿ ಪಡೆಗಳು 11 ಉಗ್ರರನ್ನು ಗುಂಡಿಕ್ಕಿ ಕೊಂದಿವೆ ಎಂದು ಸೇನಾಮೂಲಗಳು ತಿಳಿಸಿವೆ.
ಉಗ್ರರ ವಿರುದ್ದ ನಡೆದ ಕಾರ್ಯಾಚರಣೆಯಲ್ಲಿ ರಸ್ತೆ ಬದಿಯಲ್ಲಿ ಹುದುಗಿಸಿಡಲಾಗಿದ್ದ ಬಾಂಬ್‌ಸ್ಪೋಟಗೊಂಡು ಇಬ್ಬರು ಪೊಲೀಸರು ಸಾವನ್ನಪ್ಪಿದ್ದು, ನಾಲ್ಕು ಮಂದಿ ಗಾಯಗೊಂಡಿದ್ದಾರೆ ಪಶ್ಚಿಮ ಬಾಗ್ದಾದ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಕಿರ್ಕುಕ್‌ನಿಂದ 55 ಕಿ.ಮಿ.ದೂರದಲ್ಲಿರುವ ಹವಿಜಾ ಬಳಿ ಅಪರಿಚಿತ ವ್ಯಕ್ತಿಯ ಗುಂಡಿಗೆ ನಾಲ್ಕು ಮಂದಿ ಸೈನಿಕರು ಬಲಿಯಾಗಿದ್ದು ಸೈನಿಕರ ವಾಹನವನ್ನು ಸುಟ್ಟುಹಾಕಲಾಗಿದೆ ಎಂದು ಪೊಲೀಸ್ ಮುಖ್ಯಸ್ಥ ಮೇಜರ್ ಜನರಲ್ ತೋರ್ಹಾನ್ ಯೂಸುಫ್ ತಿಳಿಸಿದ್ದಾರೆ.
|