ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಪಾಕ್ ಚುನಾವಣೆ: ಪಿಪಿಎಲ್, ಪಿಎಂಎಲ್ ಬಹಿಷ್ಕಾರ
ಪಾಕಿಸ್ತಾನದ ಸಂಸತ್ತಿಗೆ ಮುಂದಿನ ವರ್ಷ ಜನವರಿ 8 ರಂದು ನ್ಯಾಷನಲ್ ಮತ್ತು ಪ್ರಾಂತೀಯ ಅಸೆಂಬ್ಲಿಗಳಿಗೆ ನಡೆಯಬೇಕಿದ್ದ ಸಾರ್ವತ್ರಿಕ ಚುನಾವಣೆಗಳು ಮುಕ್ತವಾಗಿ ನಡೆಯಲಿಕ್ಕೆ ಇಲ್ಲ ಎಂದು ಪ್ರಮುಖ ವಿರೋಧ ಪಕ್ಷಗಳಾದ ಪಾಕಿಸ್ತಾನ್ ಪಿಪಲ್ಸ್ ಪಾರ್ಟಿ ಮತ್ತು ಪಿಎಂಎಲ್-ಎನ್ ಪಕ್ಷಗಳು ಸಂಶಯ ವ್ಯಕ್ತಪಡಿಸಿ ಚುನಾವಣೆಯನ್ನು ಬಹಿಷ್ಕರಿಸುವ ಬೆದರಿಕೆ ಹಾಕಿವೆ.

ಭುಟ್ಟೊ ಮತ್ತು ನವಾಜ್ ಮಧ್ಯೆ ಸೋಮವಾರ ಮಹತ್ವದ ಮಾತುಕತೆ ನಡೆದಿದ್ದು, ಪಾಕ್‍‌ನಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಏರ್ಪಡಿಸುವಂತೆ ಉಭಯ ನಾಯಕರು ಅಧ್ಯಕ್ಷ ಮುಷರಫ್ ಮೇಲೆ ಒತ್ತಡ ತರುತ್ತಿದ್ದಾರೆ.

ಈ ಮಧ್ಯೆ, ಏಳು ವರ್ಷಗಳ ಗಡಿಪಾರು ಶಿಕ್ಷೆಯನ್ನು ಅನುಭವಿಸಿ ಮತ್ತೆ ಪಾಕಿಸ್ತಾನಕ್ಕೆ ಆಗಮಿಸಿರುವ ಪಿಎಂಎಲ್-ಎನ್ ಪಕ್ಷದ ನೇತಾರ ಮತ್ತು ಮಾಜಿ ಪ್ರಧಾನಿ ನವಾಜ್ ಶರೀಫ್ ಅವರು ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿದ್ದು, ಈ ಪಕ್ಷಕ್ಕೆ ಭಾರಿ ಹಿನ್ನಡೆ ಉಂಟಾಗಿದೆ.

ಕಳೆದ ವಾರವಷ್ಟೇ ಅವರ ಸಹೋದರ ಶಹಬಾಜ್ ನವಾಜ್ ಅವರ ನಾಮಪತ್ರ ತಿರಸ್ಕೃತಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಇದೀಗ ನವಾಜ್ ನಾಮಪತ್ರ ಸಹ ತಿರಸ್ಕೃತಗೊಂಡಿದ್ದರಿಂದ ಇದರಲ್ಲಿ ರಾಜಕೀಯ ಹಸ್ತಕ್ಷೇಪ ಅಡಗಿದೆ ಎಂದು ಆ ಪಕ್ಷದ ಮುಖಂಡರು ತಿಳಿಸಿದ್ದಾರೆ.

2000ನೇ ಇಸ್ವಿಯಲ್ಲಿ ನಡೆದ ಹೈಜಾಕ್ ಪ್ರಕರಣವೊಂದರ ಆರೋಪಿಯೆಂಬ ಕಾರಣಕ್ಕಾಗಿ ನವಾಜ್ ಅವರ ನಾಮಪತ್ರ ತಿರಸ್ಕೃತಗೊಂಡಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಕಮಲ್ ಉಝ್ ಜಮಾನ್ ತಿಳಿಸಿದ್ದಾರೆ.

ಈ ಮಧ್ಯೆ ಪಿಪಿಪಿ ಪಕ್ಷದ ನಾಯಕಿ ಬೆನಜೀರ್ ಭುಟ್ಟೊ ಅವರು ಹೇಳಿಕೆಯೊಂದನ್ನು ನೀಡಿ, ನಮ್ಮ ಪಕ್ಷ ಕಟ್ಟುನಿಟ್ಟಿನ ಭದ್ರತೆಯಲ್ಲಿ ಚುನಾವಣೆಯನ್ನು ಎದುರಿಸಲು ಸಿದ್ಧವಿದೆ ಎಂದು ತಿಳಿಸಿದ್ದಾರೆ.
ಮತ್ತಷ್ಟು
ಸೈನಿಕರಿಂದ 13 ಉಗ್ರರ ಹತ್ಯೆ,94 ಬಂಧನ
ಹಿಂದೂ ದೇವಾಲಯಗಳ ನಾಶ ಬೇಡ-ಬ್ರಿಟನ್
ನವಾಜ್ ಷರೀಫ್ ನಾಮಪತ್ರ ತಿರಸ್ಕ್ರತ
ಹಸೀನಾಗೆ ನ್ಯಾಯಾಲಯಕ್ಕೆ ಹಾಜರಾಗಲು ಆದೇಶ
ಹಿಂಸಾಚಾರ : 37 ಉಗ್ರರ ಸಾವು
ಪುಟಿನ್ ನೇತ್ರತ್ವದ ಪಕ್ಷಕ್ಕೆ ಜಯಭೇರಿ