ಆರ್ಥಿಕ ಸಹಕಾರದಲ್ಲಿ ಸಹಭಾಗಿತ್ವ ಕುರಿತಂತೆ ಭಾರತ ಮತ್ತು ಚೀನಾ ದೇಶಗಳು ಜಂಟಿಯಾಗಿ ಪರಸ್ಪರ ಒಡಂಬಡಿಕೆಯ ಪ್ರಕಟಣೆಯನ್ನು ಹೊರಡಿಸಲು ನಿರ್ಧರಿಸಿವೆ.
ಆರ್ಥಿಕ ಸಹಕಾರ ಕುರಿತಂತೆ ಉಭಯ ದೇಶಗಳ ಹಿರಿಯ ಅಧಿಕಾರಿಗಳ ಸಭೆಯ ನಂತರ ಜಂಟಿ ಪ್ರಕಟಣೆಗೆ ಸಹಿ ಹಾಕಲಿವೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಭಾರತದಿಂದ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಡಿ.ಸುಬ್ಬಾರಾವ್,ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳು,ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.
ಚೀನಾ ದೇಶದ ಅಧಿಕಾರಿಗಳಲ್ಲಿ ಹಣಕಾಸು ಸಚಿವಾಲಯದ ಉಪಸಚಿವ ಲಿ ಯಾಂಗ್, ಮತ್ತು ಇಲಾಖೆಯ ಅಧಿಕಾರಿಗಳು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು.
ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಆರ್ಥಿಕ ಹಾಗೂ ವಿದೇಶಿ ಹಣ ಹೂಡಿಕೆ ಕುರಿತಂತೆ ಭಾರತ ಚೀನಾ ದೇಶದ ಅಧಿಕಾರಿಗಳು ಸಭೆಯಲ್ಲಿ ಚರ್ಚೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.
|