ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಬೆನ್‌ಜಿರ್, ನವಾಜ್‌ರಿಂದ ಮುಷರಫ್‌ಗೆ ಎಚ್ಚರಿಕೆ
ಪಾಕಿಸ್ತಾನದ ಮಾಜಿ ಪ್ರಧಾನಿಗಳಾದ ಬೆನ್‌ಜಿರ್ ಭುಟ್ಟೋ ಹಾಗೂ ನವಾಜ್ ಷರೀಫ್ ಅವರುಗಳು ಜಂಟಿ ಸಭೆಯನ್ನು ನಡೆಸಿ ಮುಕ್ತ ಪಾರದರ್ಶಕ ಚುನಾವಣೆಗಾಗಿ ಮುಷರಫ್ ಈಡೇರಿಸದಿದ್ದಲ್ಲಿ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.

ಆಲ್ ಪಾರ್ಟಿ ಡೆಮಾಕ್ರೆಟಿಕ್ ಫ್ರಂಟ್ ಮತ್ತು ಆಲ್ ರಿಜನಲ್ ಡೆಮಾಕ್ರೆಟಿಕ್ ಪಕ್ಷಗಳು ಜಂಟಿಯಾಗಿ ಭುಟ್ಟೋ ಮತ್ತು ನವಾಜ್ ಷರೀಫ್ ಅವರ ನೇತ್ರತ್ವದಲ್ಲಿ ಸಭೆ ನಡೆಸಿ ಎರಡು ದಿನದಲ್ಲಿ ಬೇಡಿಕೆಗಳ ಪತ್ರವನ್ನು ಸಲ್ಲಿಸುವುದಾಗಿ ಪ್ರಕಟಿಸಿವೆ.

ಆಲ್ ಪಾರ್ಟಿ ಡೆಮಾಕ್ರೆಟಿಕ್ ಫ್ರಂಟ್ ಮತ್ತು ಆಲ್ ರಿಜನಲ್ ಡೆಮಾಕ್ರೆಟಿಕ್ ಪಕ್ಷಗಳು ಬೇಡಿಕೆ ಈಡೇರಿಕೆಗಾಗಿ ದಿನಾಂಕವನ್ನು ನಿಗದಿಪಡಿಸಿದ್ದು ಬೇಡಿಕೆಗಳನ್ನು ಮುಷರಫ್ ಅಂಗೀಕರಿಸದಿದ್ದಲ್ಲಿ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಹೇಳಿವೆ.

ಬೇಡಿಕೆಗಳನ್ನು ಮುಷರಫ್ ಈಡೇರಿಸದಿದ್ದಲ್ಲಿ ಚುನಾವಣೆಯನ್ನು ಬಹಿಷ್ಕರಿಸುವುದಲ್ಲದೇ, ಸಮಿತಿಯನ್ನು ರಚಿಸಿ ಮುಷರಫ್ ಅಡಳಿತದ ವಿರುದ್ದ ದೇಶದಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಆಲ್ ಪಾರ್ಟಿ ಡೆಮಾಕ್ರೆಟಿಕ್ ಫ್ರಂಟ್ ಮತ್ತು ಆಲ್ ರಿಜನಲ್ ಡೆಮಾಕ್ರೆಟಿಕ್ ಎಚ್ಚರಿಸಿವೆ.
ಮತ್ತಷ್ಟು
ಆರ್ಥಿಕ ಸಹಕಾರ: ಭಾರತ ಚೀನಾ ಮಾತುಕತೆ
ಪಾಕ್ ಚುನಾವಣೆ: ಪಿಪಿಎಲ್, ಪಿಎಂಎಲ್ ಬಹಿಷ್ಕಾರ
ಸೈನಿಕರಿಂದ 13 ಉಗ್ರರ ಹತ್ಯೆ,94 ಬಂಧನ
ಹಿಂದೂ ದೇವಾಲಯಗಳ ನಾಶ ಬೇಡ-ಬ್ರಿಟನ್
ನವಾಜ್ ಷರೀಫ್ ನಾಮಪತ್ರ ತಿರಸ್ಕ್ರತ
ಹಸೀನಾಗೆ ನ್ಯಾಯಾಲಯಕ್ಕೆ ಹಾಜರಾಗಲು ಆದೇಶ