ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆಂದು ಆರೋಪಿಸಿ ಇರಾನ್‌ನಲ್ಲಿರುವ ಕೆನಡಾ ರಾಯಭಾರಿ ಅವರನ್ನು ದೇಶ ಬಿಟ್ಟು ತೆರಳುವಂತೆ ಇರಾನ್ ಸರಕಾರ ಆದೇಶಿಸಿದೆ.
ಕೆಲವೆ ದಿನಗಳ ಹಿಂದೆ ನೇಮಕವಾದ ಕೆನಡಾ ರಾಯಭಾರಿ ಜಾನ್ ಮುಂಡಿ ಅವರನ್ನು ಇರಾನ್ ಉಚ್ಚಾಟಿಸಿರುವುದು ಸೇಡಿನ ಪ್ರಕ್ರಿಯೇವಾಗಿದೆ ಎಂದು ಕೆನಡಾದ ವಿದೇಶಾಂಗ ವ್ಯವಹಾರಗಳ ಸಚಿವ ಮ್ಯಾಕ್ಸಿಮ್ ಬರ್ನೇರ್ ಅಭಿಪ್ರಾಯಪಟ್ಟಿದ್ದಾರೆ.
ಕೆನಡಾ ಮತ್ತು ಇರಾನ್ ದೇಶಗಳು ರಾಯಭಾರಿಗಳ ಬದಲಾವಣೆ ಒಪ್ಪಂದಕ್ಕೆ ಸಿದ್ದತೆ ನಡೆಸಿದ್ದವು ಆದರೆ ಕೆನಡಾ ಇರಾನ್ ರಾಯಭಾರಿಗಳನ್ನು ಒಪ್ಪದ ಹಿನ್ನಲೆಯಲ್ಲಿ ಇರಾನ್ ಕೆನಡಾ ರಾಯಭಾರಿಯನ್ನು ಉಚ್ಚಾಟಿಸಿದೆ ಎಂದು ತಿಳಿಸಿದ್ದಾರೆ.
ಕೆನಡಾ ರಾಯಭಾರಿಯನ್ನು ಉಚ್ಚಾಟಿಸಿರುವುದು ಅನ್ಯಾಯದ ಪರಮಾವಧಿಯಾಗಿದ್ದು ಸೂಕ್ತ ಕ್ರಮವಲ್ಲ . ಇರಾನ್ ಸೂಕ್ತ ಅಭ್ಯರ್ಥಿಯನ್ನು ಕೆನಡಾದ ರಾಯಭಾರಿಯಾಗಿ ನೇಮಿಸಿದಲ್ಲಿ ಸ್ವೀಕರಿಸಲು ಸಿದ್ದವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಮ್ಯಾಕ್ಸಿಮ್ ಬರ್ನೇರ್ ತಿಳಿಸಿದ್ದಾರೆ.
|