ಬ್ರಿಟನ್ ರಾಯಭಾರಿ ಕಚೇರಿ ನವದೆಹಲಿ ಹಾಗೂ ದೇಶದಲ್ಲಿರುವ ಸಂಪರ್ಕ ಕೇಂದ್ರಗಳಲ್ಲಿ ಡಿಸೆಂಬರ್ 12 ರಿಂದ ಬಯೋಮೆಟಿಕ್ ವೀಸಾಗಳನ್ನು ಪರಿಚಯಿಸಲು ನಿರ್ಧರಿಸಿದೆ.
ಇಂಗ್ಲೆಂಡ್ನ ವಾಣಿಜ್ಯ ಪಾಲುದಾರರಾದ ವಿಎಫ್ಎಸ್ ಗ್ಲೋಬಲ್ ಕೇಂದ್ರದಲ್ಲಿ ಬ್ರಿಟನ್ ವೀಸಾ ಪಡೆಯಲು ಅವಕಾಶಗಳಿದ್ದು,ತರಬೇತಿ ಪಡೆದ ಸಿಬ್ಬಂದಿಯಿಂದ ಬೆರಳಚ್ಚು ಹಾಗೂ ಡಿಜಿಟಲ್ ಭಾವಚಿತ್ರವನ್ನು ಬಯೋಮೆಟ್ರಿಕ್ ಅಂಕಿ ಅಂಶಗಳ ದಾಖಲಾತಿಗಾಗಿ ನೀಡಬೇಕಾಗುತ್ತದೆ ಎಂದು ತಿಳಿಸಿದೆ.
ಬಯೋಮೆಟ್ರಿಕ್ ವೀಸಾ ಪಡೆಯಲು ಕೇವಲ ಐದು ನಿಮಿಷದ ಅವಧಿ ಬೇಕಾಗಿದ್ದು ಹೆಚ್ಚುವರಿ ವೀಸಾ ಶುಲ್ಕ ಪಡೆಯುವುದಿಲ್ಲ. ಹೆಚ್ಚಿನ ಅವಧಿಯ ವಿಸ್ತರಣೆಗಾಗಿ ಇದು ತುಂಬಾ ಅನುಕೂಲವಾಗಿದೆ ಎಂದು ಬ್ರಿಟನ್ ರಾಯಭಾರಿ ಕಚೇರಿ ತಿಳಿಸಿದೆ.
ನಿರಂತರವಾಗಿ ಇಂಗ್ಲೆಂಡ್ಗೆ ಭೇಟಿ ನೀಡುವ ಉದ್ಯಮಿಗಳಿಗೆ ಹಾಗೂ ಅಧಿಕಾರಿಗಳಿಗೆ ಬಯೋಮೆಟ್ರಿಕ್ ವೀಸಾ ಉತ್ತಮವಾಗಿದೆ ಎಂದು ಬ್ರಿಟನ್ ರಾಯಭಾರಿ ಕಚೇರಿ ತಿಳಿಸಿದೆ.
|