ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಭಾರತೀಯ ಪ್ರಜಾಪ್ರಭುತ್ವ ಗೌರವಾರ್ಹ
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಮೆರಿಕ ಗೌರವಿಸುತ್ತಿದ್ದು, ಮುಂದೆಯೂ ಗೌರವಿಸಲಿದೆ ಎಂದು ಭಾರತದಲ್ಲಿರುವ ಅಮೆರಿಕದ ರಾಯಭಾರಿ ಡೇವಿಡ್ ಮುಲ್‌ಫೋರ್ಡ್ ತಿಳಿಸಿದ್ದಾರೆ.

ಭಾರತ ಮತ್ತು ಅಮೆರಿಕದ ನಡುವೆ ನಡೆಯಲಿರುವ ಪರಮಾಣು ಒಪ್ಪಂದ ಕುರಿತಂತೆ ಒಪ್ಪಂದ ಸಂಪೂರ್ಣವಾದಲ್ಲಿ ಭಾರತಕ್ಕೆ ಹಾಗೂ ಇನ್ನುಳಿದ ದೇಶಗಳಿಗೆ ಲಾಭವಾಗಲಿದೆ ಎಂದರು.

ಅಮೆರಿಕದ ರಾಯಭಾರಿ ಡೇವಿಡ್ ಮುಲ್‌ಫೋರ್ಡ್ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಭ ಮುಖರ್ಜಿ ಹಾಗೂ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ ಮೆನನ್ ಅವರುಗಳನ್ನು ಭೇಟಿ ಮಾಡಿದ್ದಲ್ಲದೇ, ವಿರೋಧಪಕ್ಷಗಳ ನಾಯಕರೊಂದಿಗೆ ಸಮಾಲೋಚನೆ ನಡೆಸಿ ಪರಮಾಣು ಒಪ್ಪಂದಕ್ಕೆ ಬದ್ದರಾಗಬೇಕು ಎಂದು ಮನವಿ ಮಾಡಿದ್ದಾರೆ.

ಭಾರತ ಮತ್ತು ಅಮೆರಿಕ ದೇಶಗಳ ನಡುವೆ ಪರಮಾಣು ಒಪ್ಪಂದ ಜಾರಿಗೆ ಬರುವುದರಿಂದ ದೇಶಕ್ಕೆ ಅಗತ್ಯವಿರುವ ಪರಮಾಣು ಶಕ್ತಿಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅಮೆರಿಕದ ರಾಯಭಾರಿ ಡೇವಿಡ್ ಮುಲ್‌ಫೋರ್ಡ್ ಅಭಿಪ್ರಾಯಪಟ್ಟಿದ್ದಾರೆ
ಮತ್ತಷ್ಟು
ಬ್ರಿಟನ್: ಡಿ.12 ರಿಂದ ಬಯೋಮೆಟ್ರಿಕ್ ವೀಸಾ
ಕೆನಡಾ ರಾಯಭಾರಿ ಉಚ್ಚಾಟನೆ
ಕಾರ್ಯಾಚರಣೆ ವಿಸ್ತರಿಸುತ್ತಿರುವ ಆಲ್-ಖೈದಾ
ಬೆನ್‌ಜಿರ್, ನವಾಜ್‌ರಿಂದ ಮುಷರಫ್‌ಗೆ ಎಚ್ಚರಿಕೆ
ಆರ್ಥಿಕ ಸಹಕಾರ: ಭಾರತ ಚೀನಾ ಮಾತುಕತೆ
ಪಾಕ್ ಚುನಾವಣೆ: ಪಿಪಿಎಲ್, ಪಿಎಂಎಲ್ ಬಹಿಷ್ಕಾರ