ಉತ್ತರ ಕೊರಿಯಾದ ಉಪಪ್ರಧಾನಿ ಹಾಗೂ ಹಣಕಾಸು ಖಾತೆಯನ್ನು ಹೊಂದಿರುವ ಕ್ವಾನ್-ಒ-ಕೈ ಅವರು ಮೂರು ದಿನಗಳ ಮಾತುಕತೆಗಾಗಿ ದಕ್ಷಿಣ ಕೊರಿಯಾದ ರಾಜಧಾನಿಗೆ ಭೇಟಿ ನೀಡಿದ್ದಾರೆ.
ಪಾಂಗ್ಯಾಂಗ್ನಲ್ಲಿ ನಡೆದ ಶೃಂಗಸಭೆಯ ಮಾತುಕತೆಯಲ್ಲಿ ಉತ್ತಮ ಬೆಳವಣಿಗೆಗಳಾಗಿದ್ದು,ಉಭಯ ದೇಶಗಳು ಆರ್ಥಿಕ ಸಹಕಾರ ಒಪ್ಪಂದ ಕುರಿತಂತೆ ಮುಂದುವರೆಯಲಿವೆ ಎಂದು ಹೇಳಿದ್ದಾರೆ.
ಉಭಯ ದೇಶಗಳು ಪರಸ್ಪರ ಗಡಿರೇಖೆಯಲ್ಲಿರುವ ಯೋಜನೆಗಳನ್ನು ಜಾರಿಗೆ ತರಲು ಕಠಿಣವಾಗಿ ಶ್ರಮಿಸಬೇಕಾಗಿದ್ದು, ಒಂದೇ ದೋಣಿಯಲ್ಲಿ ಪ್ರಯಾಣಿಸುತ್ತಿದ್ದೇವೆ ಎನ್ನುವುದನ್ನು ಮರೆಯಬಾರದು ಎಂದು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಕಿವಿಮಾತು ಹೇಳಿದ್ದಾರೆ.
ಉಭಯ ದೇಶಗಳು ಶಾಂತಿ ಮಾತುಕತೆ ಹಾಗೂ ಆರ್ಥಿಕ ಸಹಕಾರ ಯೋಜನೆಗಳಲ್ಲಿ ಸಹಭಾಗಿತ್ವ ವಹಿಸಬೇಕಾಗಿದೆ ಎಂದು ದಕ್ಷಿಣ ಕೊರಿಯಾದ ಅಧ್ಯಕ್ಷ ರೋಹ್ ಮೊ ಹುಯಾನ್ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಅವರಿಗೆ ಸ್ಪಷ್ಟಪಡಿಸಿದ್ದಾರೆ.
ಉತ್ತರ ಕೊರಿಯಾದಲ್ಲಿ ಕೈಗಾರಿಕೆ ಪಾರ್ಕ್, ಹಡಗು ನಿರ್ಮಾಣ ಘಟಕಗಳು, ರಸ್ತೆ ಅಭಿವೃದ್ಧಿ, ರೈಲು ಸಂಪರ್ಕಗಳನ್ನು ನಿರ್ಮಿಸುವ ಬಗ್ಗೆ ಉಭಯ ದೇಶಗಳ ಮಾತುಕತೆ ಮುಂದುವರೆದಿದೆ ಎಂದು ಹೇಳಿದ್ದಾರೆ.
|