ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಎಲ್‌ಟಿಟಿಇ ನಿರ್ನಾಮಕ್ಕೆ ಪೊಟ್ಟು ಅಮ್ಮನ್ ಬಲಿ ಅಗತ್ಯ
ಎಲ್‌ಟಿಟಿಇ ಉಗ್ರರ ನಿರ್ನಾಮಕ್ಕಾಗಿ ಮೊದಲು, ಎಲ್‌ಟಿಟಿಇ ಗುಪ್ತಚರ ದಳದ ಮುಖ್ಯಸ್ಥ ಪೊಟ್ಟು ಅಮ್ಮನ್ ಹತ್ಯೆ ಅಗತ್ಯವಾಗಿದೆ ಎಂದು ಕಳೆದ ವಾರ ಬಾಂಬ್ ದಾಳಿಯಿಂದ ಪಾರಾದ ಸಚಿವ ದೇವಾನಂದ್ ಹೇಳಿದ್ದಾರೆ.

ಪೊಟ್ಟು ಅಮ್ಮನ್ ಅವರ ಹತ್ಯೆ ಮಾಡಿದಲ್ಲಿ ಉಗ್ರರ ಮುಖ್ಯಸ್ಥ ವೆಲ್ಲು ಪಿಳ್ಳೈ ಪ್ರಭಾಕರನ್ ಅಸಹಾಯಕನಾಗುತ್ತಾನೆ ಎಂದು ಈಳಂ ಪೀಪಲ್ಸ್ ಡೆಮಾಕ್ರೆಟಿಕ್ ಫ್ರಂಟ್‌ ಮುಖ್ಯಸ್ಥ ಹಾಗೂ ಸಮಾಜ ಕಲ್ಯಾಣ ಸಚಿವ ದೇವಾನಂದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಲ್‌ಟಿಟಿಇಯನ್ನು ಕೊನೆಗಾಣಿಸಬೇಕಾದಲ್ಲಿ ಪ್ರಭಾಕರನ್‌ಗೆ ಸೂಕ್ತ ಸಲಹೆಗಳನ್ನು ನೀಡುತ್ತಿರುವ ಗುಪ್ತಚರದಳದ ಮುಖ್ಯಸ್ಥ ಪೊಟ್ಟು ಅಮ್ಮನ್ ಹತ್ಯೆ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಪೊಟ್ಟು ಅಮ್ಮನ್ ಎಲ್‌ಟಿಟಿಇಯ ಸರ್ವಸ್ವವಾಗಿದ್ದು ಒಂದು ವೇಳೆ ಅಮ್ಮನ್ ಹತ್ಯೆಯಾದಲ್ಲಿ ಎಲ್‌ಟಿಟಿಇ ನಾಶವಾಗುತ್ತದೆ ಎಂದು ಸಚಿವ ದೇವಾನಂದ್ ಹೇಳಿದ್ದಾರೆ.
ಮತ್ತಷ್ಟು
ಶೃಂಗ ಸಭೆ:ಉತ್ತರ ಕೊರಿಯಾ, ದ.ಕೊರಿಯಾ ಮಾತುಕತೆ
ಭಾರತೀಯ ಪ್ರಜಾಪ್ರಭುತ್ವ ಗೌರವಾರ್ಹ
ಬ್ರಿಟನ್: ಡಿ.12 ರಿಂದ ಬಯೋಮೆಟ್ರಿಕ್ ವೀಸಾ
ಕೆನಡಾ ರಾಯಭಾರಿ ಉಚ್ಚಾಟನೆ
ಕಾರ್ಯಾಚರಣೆ ವಿಸ್ತರಿಸುತ್ತಿರುವ ಆಲ್-ಖೈದಾ
ಬೆನ್‌ಜಿರ್, ನವಾಜ್‌ರಿಂದ ಮುಷರಫ್‌ಗೆ ಎಚ್ಚರಿಕೆ