ತಾಲಿಬಾನ್ ಬೆಂಬಲಿತ ಉಗ್ರಗಾಮಿಗಳು ಸ್ವಾತ್ ಕಣಿವೆಯಲ್ಲಿರುವ ಆಡಿಯೋ ಕ್ಯಾಸೆಟ್ ಹಾಗೂ ಕ್ಷೌರಿಕನ ಅಂಗಡಿಯನ್ನು ಧ್ವಂಸಗೊಳಿಸಿದ್ದಾರೆ.
ತಾಲಿಬಾನ್ ಬೆಂಬಲಿತ ಉಗ್ರರು, ನಾರ್ಥ್ ವೆಸ್ಟ್ ಫ್ರಂಟೈಯರ್ ಪ್ರಾಂತ್ಯದಲ್ಲಿರುವ ಆಡಿಯೋ ಕ್ಯಾಸೆಟ್ ಹಾಗೂ ಕ್ಷೌರಿಕನ ಅಂಗಡಿಯ ಮಾಲೀಕರು ಇಸ್ಲಾಮ್‌ಗೆ ವಿರುದ್ದವಾಗಿ ನಡೆದುಕೊಂಡಿದ್ದರಿಂದ ಮಳಿಗೆಗಳನ್ನು ಸುಟ್ಟುಹಾಕಿದ್ದಾರೆ ಎಂದು ಹೇಳಲಾಗಿದೆ.
ನಾರ್ಥ್ ವೆಸ್ಟ್ ಫ್ರಂಟೈಯರ್ ಪ್ರಾಂತ್ಯದಲ್ಲಿ ಅಪರಿಚಿತ ಉಗ್ರರು ಕಳೆದ ಹಲವು ದಿನಗಳಿಂದ ಬೆದರಿಕೆ ನೀಡುತ್ತಿದ್ದು, ಇಂದು ಮಳಿಗೆಯನ್ನು ಸ್ಪೋಟಿಸಿದ್ದಾರೆ ಎಂದು ಮಳಿಗೆಯ ಮಾಲೀಕ ದಾವುದ್ ಖಾನ್ ಪೊಲೀಸರಿಗೆ ತಿಳಿಸಿದ್ದಾರೆ.
ಉಗ್ರರು ಸ್ಪೋಟಕಗಳನ್ನು ಉಪಯೋಗಿಸಿ ಮಳಿಗೆಗಳನ್ನು ಸ್ಪೋಟಿಸಿದ್ದರೂ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಸ್ವಾತ್ ಕಣಿವೆಯಲ್ಲಿ ಅಪರಿಚಿತ ವ್ಯಕ್ತಿ ಇಸ್ಲಾಮ್‌ಗೆ ವಿರುದ್ಧವಾದ ವಿಡೀಯೋ ವ್ಯಾಪಾರವನ್ನು ಮಾಡಬಾರದೆಂದು ಜನತಗೆ ಎಚ್ಚರಿಕೆ ನೀಡಿದ್ದನೆಂದು ಹೇಳಲಾಗಿದೆ
|