ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಸೇನಾ ಕಾರ್ಯಾಚರಣೆ: 21 ಉಗ್ರರ ಹತ್ಯೆ
ಶ್ರೀಲಂಕಾದ ಉತ್ತರ ಜಾಫ್ನಾದಲ್ಲಿ ಉಗ್ರರ ವಿರುದ್ಧದ ಸೇನಾಕಾರ್ಯಾಚರಣೆಯಲ್ಲಿ ಇಬ್ಬರು ಸೈನಿಕರು ಸೇರಿದಂತೆ 21 ಉಗ್ರರು ಬಲಿಯಾಗಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಕೇಂದ್ರ ಕಚೇರಿ ತಿಳಿಸಿದೆ.

ಉಗ್ರರ ರೇಡಿಯೋ ಸಂಪರ್ಕವನ್ನು ಅಡ್ಡಿಪಡಿಸಿದ ನಂತರ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಇಬ್ಬರು ಉಗ್ರರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಒಬ್ಬ ಸೈನಿಕ ಕೂಡಾ ಗಾಯಗೊಂಡಿದ್ದಾನೆ ಎಂದು ಸೇನಾ ಮೂಲಗಳು ತಿಳಿಸಿವೆ.

ಮುಹಾಮಲೈನಲ್ಲಿ ನಡೆದ ಪ್ರತ್ಯೇಕ ಸೇನಾಕಾರ್ಯಾಚರಣೆಯಲ್ಲಿ ಐವರು ಉಗ್ರರು ಹತರಾಗಿದ್ದಾರೆ. ಉಗ್ರರ ಬಂಕರ್‌ಗಳನ್ನು ನಾಶಪಡಿಸಲಾಗಿದೆ ಎಂದು ರಾಷ್ಟ್ರೀಯ ಭದ್ರತಾ ಕೇಂದ್ರ ಕಚೇರಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ..

ಜಾಫ್ನಾದ ಕಿಲಾಲಿಯ ಗಡಿರೇಖೆಯಲ್ಲಿ ಉಗ್ರರು ನೂತನ ಬಂಕರ್‌ಗಳನ್ನು ನಿರ್ಮಿಸುತ್ತಿರುವ ಸಂದರ್ಭದಲ್ಲಿ ಸೇನೆ ದಾಳಿ ನಡೆಸಿ 10 ಉಗ್ರರು ಬಲಿಯಾಗಿದ್ದು, ಹಲವಾರು ಉಗ್ರರು ಗಾಯಗೊಂಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಮತ್ತಷ್ಟು
ತಾಲಿಬಾನ್ ಬೆಂಬಲಿಗರಿಂದ ಮಳಿಗೆಗಳ ಧ್ವಂಸ
ಎಲ್‌ಟಿಟಿಇ ನಿರ್ನಾಮಕ್ಕೆ ಪೊಟ್ಟು ಅಮ್ಮನ್ ಬಲಿ ಅಗತ್ಯ
ಶೃಂಗ ಸಭೆ:ಉತ್ತರ ಕೊರಿಯಾ, ದ.ಕೊರಿಯಾ ಮಾತುಕತೆ
ಭಾರತೀಯ ಪ್ರಜಾಪ್ರಭುತ್ವ ಗೌರವಾರ್ಹ
ಬ್ರಿಟನ್: ಡಿ.12 ರಿಂದ ಬಯೋಮೆಟ್ರಿಕ್ ವೀಸಾ
ಕೆನಡಾ ರಾಯಭಾರಿ ಉಚ್ಚಾಟನೆ