ಭಾರತೀಯ ಮೂಲದ ಅಮೆರಿಕ ವಿದ್ಯಾರ್ಥಿನಿ ಇಶಾ ಹಿಮಾನಿ ಜೈನ್ ವಿಜ್ಞಾನ ಸ್ಪರ್ಧೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನಗಳಿಸಿದ್ದಾರೆ. 16 ವರ್ಷದ ನಿಶಾ ಹಿಮಾನಿ ಪೆನ್ಸೆಲ್ವಿನಿಯಾದ ಬೆತ್ಲ್ಹೆಮ್ನ ಶಾಲೆಯಲ್ಲಿ ನಡೆದ ಗಣಿತ, ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳಲ್ಲಿ ಅತ್ಯಧಿಕ ಅಂಕಗಳನ್ನು ಪಡೆದಿದ್ದಾರೆ ಎಂದು ಶಾಲಾ ಮೂಲಗಳು ವರದಿ ಮಾಡಿವೆ.
ಗಣಿತ, ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳಲ್ಲಿ ಅತ್ಯಧಿಕ ಅಂಕಗಳನ್ನು ಪಡೆದಿದ್ದಕ್ಕಾಗಿ ಸರಕಾರ 1 ಲಕ್ಷಡಾಲರ್ ಸ್ಕಾಲರ್ಶಿಪ್ ಕೊಡುಗೆಯಾಗಿ ನೀಡಿದ್ದು, ಜಿಬ್ರಾ ಮೀನುಗಳು ಕುರಿತು ಅಧ್ಯಯನ ನಡೆಸಲಿದ್ದಾರೆ.
ಜಿಬ್ರಾ ಮೀನಿನ ಸ್ನಾಯಗಳ ಬೆಳವಣಿಗೆ ಮಗುವಿನ ಸ್ನಾಯಗಳ ಬೆಳವಣಿಗೆ ಒಂದೇ ತೆರನಾಗಿದ್ದರಿಂದ ಈ ಕುರಿತು ಅಧ್ಯಯನ ಮಾಡಲು ಇಚ್ಚಿಸುವುದಾಗಿ ಹೇಳಿದ್ದಾರೆ. ಹಲವು ವಿಷಯಗಳ ಕುರಿತು ಮಾತನಾಡಿದ ನಿಶಾ ಯಾಲೆ ಯಲ್ಲಿರುವ ಹಾರ್ವರ್ಡ್ನ ಮಸಾಚುಸೆಟ್ಸ್ ಅಧ್ಯಯನ ಮುಂದುವರೆಯಲು ಅರ್ಜಿಯನ್ನು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
|