ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
31 ಭಾರತೀಯರ ಮೇಲೆ ಕೊಲೆ ಯತ್ನ ಆರೋಪ
ಮಲೇಷಿಯಾದಲ್ಲಿರುವ ಭಾರತೀಯರು ಮೆರವಣಿಗೆ ಸಂದರ್ಭದಲ್ಲಿ ನಡೆಸಿದ ಹಿಂಸಾಚಾರದಲ್ಲಿ ಪೊಲೀಸರನ್ನು ಗಾಯಗೊಳಿಸಿದ್ದರಿಂದ ಐವರು ಭಾರತೀಯರನ್ನು ಕೊಲೆ ಯತ್ನ ಅರೋಪದಲ್ಲಿ ಬಂಧಿಸಿದ್ದಾರೆ.

ನವೆಂಬರ್ 25 ರಂದು ಹಿಂದೂ ದೇವಾಲಯದ ಹತ್ತಿರ ನಡೆಸಿದ ನಿಷೇಧಿತ ಮೆರವಣಿಗೆಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ 31 ಜನರನ್ನು ಕೊಲೆ ಯತ್ನದ ಆರೋಪದ ಮೇರೆಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

ಬೇಡಿಕೆಗಳ ಈಡೇರಿಕೆಗಾಗಿ ಮೆರವಣಿಗೆ ನಡೆಸುವುದು ಸಂವಿಧಾನದ ವ್ಯಾಪ್ತಿಯಲ್ಲಿ ಇರುವುದರಿಂದಾಗಿ 31 ಜನರ ವಿರುದ್ಧವಿರುವ ಪ್ರಕರಣವನ್ನು ನ್ಯಾಯಾಲಯ ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ಆರೋಪಿಗಳ ಪರ ವಕೀಲರು ಒತ್ತಾಯಿಸಿ, ಇಲ್ಲವಾದಲ್ಲಿ ಕನಿಷ್ಟ 20 ವರ್ಷಗಳ ಶಿಕ್ಷೆಯನ್ನು ಆರೋಪಿಗಳು ಅನುಭವಿಸಬೇಕಾಗುತ್ತದೆ ಎಂದು ಹೇಳಿದರು

ಮಲೇಷಿಯಾದ ಇತಿಹಾಸದಲ್ಲಿ ಮೆರವಣಿಗೆ ಹಿಂಸಾಚಾರದಲ್ಲಿ ಕೊಲೆಯತ್ನ ಆರೋಪವನ್ನು ಪ್ರಪ್ರಥಮ ಬಾರಿಗೆ ಸಲ್ಲಿಸಲಾಗಿದೆ ಎಂದು ಆರೋಪಿ ಪರ ವಕೀಲರಾದ ವಿ,ಕೆ ,ಗಣೇಶನ್ ತಿಳಿಸಿದ್ದಾರೆ.
ಮತ್ತಷ್ಟು
ಪ್ರಧಾನಿ ಹುದ್ದೆಗೆ ನಾನು ಅಂಕಾಂಕ್ಷಿಯಲ್ಲ
ಸೇನಾ ವಾಹನದ ಮೇಲೆ ಆತ್ಮಹತ್ಯಾ ದಾಳಿ
ಭಾರತ ಸಂಜಾತೆ, ವಿಜ್ಞಾನ ಸ್ಪರ್ಧೆಯಲ್ಲಿ ಪ್ರಥಮ
ಸೇನಾ ಕಾರ್ಯಾಚರಣೆ: 21 ಉಗ್ರರ ಹತ್ಯೆ
ತಾಲಿಬಾನ್ ಬೆಂಬಲಿಗರಿಂದ ಮಳಿಗೆಗಳ ಧ್ವಂಸ
ಎಲ್‌ಟಿಟಿಇ ನಿರ್ನಾಮಕ್ಕೆ ಪೊಟ್ಟು ಅಮ್ಮನ್ ಬಲಿ ಅಗತ್ಯ