ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಣಿಯಲ್ಲಿ ಅನಿಲ ಸ್ಫೋಟ:46 ಸಾವು
ಉತ್ತರ ಚೀನದ ಕಲ್ಲಿದ್ದಲು ಗಣಿಯಲ್ಲಿ ಗುರುವಾರ ಅನಿಲ ಸ್ಫೋಟ ಸಂಭವಿಸಿ 46 ಮಂದಿ ಕಾರ್ಮಿಕರು ಅಸುನೀಗಿದ್ದಾರೆ ಮತ್ತು ಅನೇಕ ಮಂದಿ ಭೂಗರ್ಭದೊಳಗೆ ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕೃತ ಸರ್ಕಾರಿ ವೆಬ್‌ಸೈಟ್ ತಿಳಿಸಿದೆ. ಶಾಂಕ್ಸಿ ಉತ್ತರಪ್ರಾಂತ್ಯದ ಹಾಂಗ್‌ಟಾಂಗ್ ಕೌಂಟಿಯಲ್ಲಿರುವ ಗಣಿಯಲ್ಲಿ ಈ ಸ್ಫೋಟ ಸಂಭವಿಸಿದೆ. ಶಾಂಕ್ಸಿ ಚೀನದಲ್ಲಿ ಅತ್ಯಧಿಕ ಪ್ರಮಾಣದ ಕಲ್ಲಿದ್ದಲು ಉತ್ಪಾದಿಸುವ ಪ್ರಾಂತ್ಯವಾಗಿದೆ.

ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಐವರನ್ನು ಸುರಕ್ಷಿತವಾಗಿ ಪಾರು ಮಾಡಲಾಗಿದೆ ಎಂದು ಏಜನ್ಸಿ ತಿಳಿಸಿದೆ. ಚೀನಾದ ಕೆಲಸ ಸುರಕ್ಷತೆಯ ಕಾವಲುಸಂಸ್ಥೆಯದಾ ಲೈ ಯಿಜಾಂಗ್ ಅಪಘಾತದ ಸ್ಥಳಕ್ಕೆ ತಂಡವನ್ನು ಕಳಿಸಿದ್ದು, ಗಣಿಗಾರಿಕೆಯಲ್ಲಿ ಹುದುಗಿರುವ ಗುಪ್ತ ಅಪಾಯಗಳ ಬಗ್ಗೆ ಅದು ತನಿಖೆ ಮಾಡುತ್ತಿದೆ.

ಸುರಕ್ಷತೆ ನಿಯಮಗಳನ್ನು ಬಿಗಿಗೊಳಿಸಲು ರಾಷ್ಟ್ರ ಪ್ರಯತ್ನಿಸುತ್ತಿದ್ದರೂ, ಚೀನದ ಕಲ್ಲಿದ್ದಲು ಕೈಗಾರಿಕೆಯು ವಿಶ್ವದಲ್ಲೇ ಮಾರಕ ದುಡಿಯುವ ಸ್ಥಳವೆಂದು ಹೆಸರಾಗಿದ್ದು, ಪ್ರತಿವರ್ಷ 5000 ಜನರನ್ನು ಬಲಿತೆಗೆದುಕೊಳ್ಳುತ್ತಿದೆ.
ಮತ್ತಷ್ಟು
ಆಸ್ಟ್ರೇಲಿಯ: ಕಿರ್ಪಾನ್, ಬುರ್ಖಾಗೆ ಶಿಫಾರಸು
ಮುಕ್ತ, ಪಾರದರ್ಶಕ ಚುನಾವಣೆಗೆ ಆಯೋಗ ನಿರ್ಧಾರ
31 ಭಾರತೀಯರ ಮೇಲೆ ಕೊಲೆ ಯತ್ನ ಆರೋಪ
ಪ್ರಧಾನಿ ಹುದ್ದೆಗೆ ನಾನು ಅಂಕಾಂಕ್ಷಿಯಲ್ಲ
ಸೇನಾ ವಾಹನದ ಮೇಲೆ ಆತ್ಮಹತ್ಯಾ ದಾಳಿ
ಭಾರತ ಸಂಜಾತೆ, ವಿಜ್ಞಾನ ಸ್ಪರ್ಧೆಯಲ್ಲಿ ಪ್ರಥಮ