ಜಗತ್ತಿನ ಎಲ್ಲ ರಾಷ್ಟ್ರಗಳು ಪ್ರತಿಯೊಂದು ಧರ್ಮವನ್ನು ಗೌರವಿಸಿ ಧರ್ಮಾಚರಣೆಗೆ ಮುಕ್ತ ಅವಕಾಶ ನೀಡಬೇಕು ಎಂದು ಅಮೆರಿಕ ಹೇಳಿದೆ.
ಮಲೇಷಿಯಾದಲ್ಲಿ ಇತ್ತಿಚೆಗೆ ಹಿಂದೂಗಳ ಮೇಲೆ ನಡೆದ ಘಟನೆಯ ವಿವರಗಳು ತಿಳಿದುಬಂದಿಲ್ಲವಾದ್ದರಿಂದ ನಾನು ಪ್ರತಿಕ್ರಯಿಸುವುದಿಲ್ಲ ಎಂದು ಅಮೆರಿಕದ ಉಪ ವಕ್ತಾರ್ ಟಾಮ್ ಕ್ಯಾಸಿ ಹೇಳಿದ್ದಾರೆ.
ಜಗತ್ತಿನ ಎಲ್ಲ ರಾಷ್ಟ್ರಗಳಿಗೆ ಈ ಹೇಳಿಕೆ ಅನ್ವಯವಾಗುತ್ತದೆ. ಧರ್ಮಸ್ವಾತಂತ್ರವನ್ನು ಮುಕ್ತವಾಗಿ ಮಾತನಾಡುವುದು ಮಾನವರ ಮೂಲಭೂತ ಹಕ್ಕಾಗಿದ್ದು, ಜಗತ್ತಿನ ಪ್ರತಿಯೊಂದು ರಾಷ್ಟ್ರಗಳು ಗೌರವಿಸಬೇಕು ಎಂದು ಹೇಳಿದ್ದಾರೆ.
ನವೆಂಬರ್ 25ರಂದು ಹಿಂದೂಗಳು ನಡೆಸಿದ ಸರಕಾರ ನಿಷೇಧಿಸಿದ ಮೆರವಣಿಗೆಯಲ್ಲಿ ನಡೆದ ಪೊಲೀಸ್ ದೌರ್ಜನ್ಯ ವಿರೋದಿಸಿ ಪ್ರಧಾನಿ ಮನಮೋಹನ್ಸಿಂಗ್ ಕಳವಳ ವ್ಯಕ್ತಪಡಿಸಿದ್ದರು.
ಮಲೇಷಿಯಾ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎನ್ನುವ ಆರೋಪಗಳನ್ನು ತಳ್ಳಿ ಹಾಕಿ ದೇಶದ ಆಂತರಿಕ ವಿಷಯಗಳಲ್ಲಿ ವಿದೇಶಗಳು ಮಧ್ಯಸ್ಥಿಕೆ ವಹಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿತ್ತು.
ನವೆಂಬರ್ 25ರಂದು ಹಿಂದೂಗಳು ನಡೆಸಿದ ಸರಕಾರ ನಿಷೇಧಿಸಿದ ಮೆರವಣಿಗೆಯಲ್ಲಿ 31 ಜನರ ವಿರುದ್ದ ಪೊಲೀಸ್ರು ಕೊಲೆಯತ್ನ ಪ್ರಕರಣವನ್ನು ದಾಖಲಿಸಿದ್ದರು.
|