ಕಾನುನೂ ಅಡಳಿತಾತ್ಮಕ ಕಚೇರಿಗೆ ಬಂದ ಪಾರ್ಸೆಲ್ ತೆರೆದು ಪರಿಶೀಲಿಸಿದಾಗ ಸ್ಪೋಟಗೊಂಡು ಒಬ್ಬ ಮಹಿಳೆ ಸಾವನ್ನಪ್ಪಿದ್ದಾಳೆ.
ಮಹಿಳೆ ಪಾರ್ಸೆಲ್ ತೆಗೆದು ನೋಡುವಾಗ ಹತ್ತಿರದಲ್ಲಿ ನಿಂತಿದ್ದ ವಕೀಲರು ಗಂಭೀರವಾಗಿ ಗಾಯಗೊಂಡಿದ್ದಾರೆ.ಆದರೆ ಸಾವಿನ ದವಡೆಯಿಂದ ಪಾರಾಗಿದ್ದಾರೆ ಎಂದು ಆಂತರಿಕ ವ್ಯವಹಾರಗಳ ಸಚಿವ ಮಿಛಾಲೆ ಆಲಿಯಟ್ ಮ್ಯಾರಿ ಹೇಳಿದ್ದಾರೆ.
ಕಟ್ಟಡದ ನಾಲ್ಕನೇಯ ಅಂತಸ್ತಿನಲ್ಲಿರುವ ಕಾನುನೂ ಅಡಳಿತಾತ್ಮಕ ಕಚೇರಿಗೆ ಕಳುಹಿಸಲಾದ ಪಾರ್ಸೆಲ್ನಲ್ಲಿ ಎರಡು ಸ್ಪೋಟಕಗಳಲ್ಲಿ ಇದ್ದು ಒಂದು ಮಾತ್ರ ಸ್ಪೋಟಗೊಂಡಿದೆ ಎಂದು ಸಚಿವೆ ಮ್ಯಾರಿ ಹೇಳಿದ್ದಾರೆ.
ಕಾನುನೂ ಅಡಳಿತಾತ್ಮಕ ಕಚೇರಿ ಅಡಳಿತ ಹಾಗೂ ವಾಣಿಜ್ಯಿಕ ವಿಭಾಗಗಳನ್ನು ನಿರ್ವಹಿಸುತ್ತಿದ್ದು, ಸ್ಪೋಟಕ್ಕೆ ಕಾರಣಗಳು ಸದ್ಯಕ್ಕೆ ತಿಳಿದುಬಂದಿಲ್ಲವೆಂದು ಸ್ಪೋಟದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ.
|