ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನವಾಜ್ ಸಹೋದರ ಶಾಹಬಾಜ್‌ಗೆ ಜಾಮೀನು
ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಸಹೋದರ ಶಾಹಬಾಜ್ ಅವರಿಗೆ 1998ರಲ್ಲಿ ಐವರು ವಿದ್ಯಾರ್ಥಿಗಳ ಹತ್ಯೆ ಪ್ರಕರಣದಲ್ಲಿ ಅಂತರಿಕ ಜಾಮೀನು ದೊರೆತಿದೆ.

ಭಯೋತ್ಪಾದನಾ ವಿರೋಧಿ ನ್ಯಾಯಾಲಯಕ್ಕೆ ಹಾಜರಾದ ಶಾಹಬಾಜ್ ಅವರಿಗೆ ನ್ಯಾಯಾಲಯ ಡಿಸೆಂಬರ್ 8 ರವರೆಗೆ ಜಾಮೀನು ನೀಡಿ ಆದೇಶ ಹೊರಡಿಸಿತು.

ವಂಚನೆ ಆರೋಪದ ಮೇಲೆ ಮುಷರಫ್ ಗಡಿಪಾರು ಮಾಡಿದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ಜಿದ್ದಾಕ್ಕೆ ಶಾಹಬಾಜ್ ತೆರಳಿದ್ದರಿಂದ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಿಲ್ಲವೆಂದು ಪಿಎಂಎಲ್ ಮುಖಂಡರು ತಿಳಿಸಿದ್ದಾರೆ.

ಸೌದಿ ಅರೇಬಿಯಾದ ಜಿದ್ದಾಗೆ ತೆರಳಲು ಕಾರಣರಾದ ಪಂಜಾಬ್ ಮಾಜಿ ಮುಖ್ಯಮಂತ್ರಿ ಹಾಗೂ ಇನ್ನಿತರ ಅಧಿಕಾರಿಗಳನ್ನು ಕೂಡಾ ನ್ಯಾಯಾಲಯ ಪ್ರಕರಣದಲ್ಲಿ ದಾಖಲಿಸಿಕೊಳ್ಳಬೇಕು ಎಂದು ಶಾಹಬಾಜ್ ಒತ್ತಾಯಿಸಿದ್ದಾರೆ.


ಮತ್ತಷ್ಟು
ಪಾರ್ಸಲ್ ಸ್ಪೋಟ: ಮಹಿಳೆ ಸಾವು
ಭುಟ್ಟೋ ದುಬೈ ಪ್ರಯಾಣಕ್ಕೆ ತಡೆ
ಧರ್ಮಸ್ವಾತಂತ್ರಕ್ಕೆ ಮುಕ್ತ ಅವಕಾಶ: ಅಮೆರಿಕ
ಫಜುಲ್ಲಾ ವಿರುದ್ದ ಸೇನಾ ಕಾರ್ಯಾಚರಣೆ
ಇರಾನ್‌ನಲ್ಲಿ ಯುವಕನಿಗೆ ಗಲ್ಲುಶಿಕ್ಷೆ
ಗಣಿಯಲ್ಲಿ ಅನಿಲ ಸ್ಫೋಟ:46 ಸಾವು