ಮುಂಬರುವ ಚುನಾವಣೆಗಳಲ್ಲಿ ಅಕ್ರಮ ಮತದಾನ ನಡೆದಲ್ಲಿ ಭೀಕರ ಪರಿಣಾಮಗಳನ್ನು ಎದುರಿಸಬೇಕಾದಿತು ಎಂದು ಮಾಜಿ ಪ್ರಧಾನಿ ಬೆನ್‌ಜಿರ್ ಭುಟ್ಟೋ ಪಾಕ್ ಸರಕಾರವನ್ನು ಎಚ್ಚರಿಸಿದ್ದಾರೆ.
ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮಕ್ತ ಮತ್ತು ನಿಷ್ಪಕ್ಷಪಾತ ಮತದಾನ ನಡೆಯುವ ಭರವಸೆಯ ಮೇಲೆ ಚುನಾವಣೆಯಲ್ಲಿ ಭಾಗವಹಿಸುವ ನಿರ್ಧಾರ ಕೈಗೊಂಡಿದ್ದು, ಪ್ರಜಾಪ್ರಭುತ್ವದೆಡೆಗೆ ಶಾಂತಿಯಿಂದ ತೆರಳಬೇಕೆನ್ನುವುದೆ ನಮ್ಮ ಇಚ್ಚೆಯಾಗಿದೆ ಎಂದು ಭುಟ್ಟೋ ಹೇಳಿದ್ದಾರೆ.
ಒಂದು ವೇಳೆ ಚುನಾವಣೆಯಲ್ಲಿ ಅಕ್ರಮ ಮತದಾನ ನಡೆದಲ್ಲಿ ವಿರೋಧ ಪಕ್ಷಗಳು ದೇಶದಾದ್ಯಂತ ಭಾರಿ ಪ್ರತಿಭಟನೆಯನ್ನು ಸರಕಾರ ಎದುರಿಸಬೇಕಾಗುತ್ತದೆ ಎಂದು ಗೋಲ್ರಾ ಷರೀಫ್ ದರ್ಗಾಗೆ ಭೇಟಿ ನೀಡಿ ಮಾತನಾಡುತ್ತಿದ್ದರು
ವಿರೋಧ ಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದರೂ ಸರಕಾರ ಹಾಗೂ ಚುನಾವಣಾ ಆಯೋಗದ ಅಶ್ವಾಸನೆಯ ಮೇರೆಗೆ ಚುನಾವಣೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿವೆ ಎಂದು ಮಾಜಿ ಪ್ರಧಾನಿ ಬೆನ್‌ಜಿರ್ ಭುಟ್ಟೋ ತಿಳಿಸಿದ್ದಾರೆ.
|