ಪರಮಾಣು ಬಾಂಬ್ಗಳ ತಯಾರಿಕೆಗೆ ಅಗತ್ಯವಾದ ಯುರೇನಿಯಂ ಉತ್ಪಾದನೆಯನ್ನು ನಿಲ್ಲಿಸಿ ಪರಿಶುದ್ಧರಾಗಿ ಹೊರಬನ್ನಿ ಎಂದು ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಇರಾನ್ಗೆ ಕರೆ ನೀಡಿದ್ದಾರೆ.
ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಅವರ ಕರೆಯನ್ನು ತಳ್ಳಿಹಾಕಿದ ಇರಾನ್ ಅಧ್ಯಕ್ಷ ಅಹಮದಿನೆಜಾದ್ ಪರಮಾಣು ಕಾರ್ಯಕ್ರಮಗಳನ್ನು ನಾಗರಿಕ ಉಪಯೋಗಕ್ಕಾಗಿ ಉತ್ಪಾದಿಸಲಾಗುತ್ತಿದೆಯೇ ಹೊರತು ಪರಮಾಣು ಬಾಂಬ್ ತಯಾರಿಸಲು ಅಲ್ಲ ಎಂದು ಹೇಳಿದ್ದಾರೆ. ಪ್ರಸ್ತುತ ಇರಾನ್ ದೇಶಕ್ಕೆ ಗೆಲುವಾಗಿದ್ದು, ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಅವರಿಗೆ ಸೋಲಾಗಿದೆ ಎಂದು ಪಶ್ಚಿಮ ಇರಾನ್ನ ಐಲಾಮ್ ನಗರದಲ್ಲಿ ನಡೆದ ಸಭೆಯಲ್ಲಿ ಹೇಳಿದರು. ಅಮೆರಿಕದ ಗುಪ್ತಚರ ಸಂಸ್ಥೆಗಳು ಇರಾನ್ ನಾಲ್ಕು ವರ್ಷಗಳ ಹಿಂದೆ ಪರಮಾಣು ಶಸ್ತ್ರಾಸ್ತ್ರಗಳ ಉತ್ಪಾದನೆಯನ್ನು ನಿಲ್ಲಿಸಿದೆ ಎಂದು ವರದಿ ಮಾಡಿವೆ. ಇರಾನ್ಗೆ ನಿರ್ಭಂಧ ಕುರಿತಂತೆ ಅಮೆರಿಕ, ರಷ್ಯಾ, ಚೀನಾ ಫ್ರಾನ್ಸ್ ಬ್ರಿಟನ್ ದೇಶಗಳು ಮೂರನೇಯ ಸುತ್ತಿನ ಮಾತುಕತೆಯಲ್ಲಿ ಹೆಚ್ಚಿನ ಒತ್ತಡ ತರಲಿವೆ ಎಂದು ಮೂಲಗಳು ತಿಳಿಸಿವೆ.
|