ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತ ಪಾಕ್ ಮಾತುಕತೆ
ಕೇಂದ್ರ ವಿದೇಶಾಂಗ ಸಚಿವ ಪ್ರಣಭ ಮುಖರ್ಜಿ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಸಲಹೆಗಾರ ಇನಾಮುಲ್ ಹಕ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಪಾಕಿಸ್ತಾನದಲ್ಲಿ ಅಧ್ಯಕ್ಷ ಪರ್ವೇಜ್ ಮುಷರಫ್ ತುರ್ತುಪರಿಸ್ಥಿತಿ ಹೇರಿಕೆಯ ನಂತರ ನಡೆದ ಮೊದಲ ಉನ್ನತ ಮಟ್ಟದ ಸಭೆಯಾಗಿದೆ.ನವದೆಹಲಿಯಲ್ಲಿ ನಡೆಯಲಿರುವ ಸಾರ್ಕ್ ಸಭೆಯಲ್ಲಿ ಪಾಲ್ಗೊಳ್ಳಲು ವಿದೇಶಾಂಗ ಸಚಿವಾಲಯದ ಸಲಹೆಗಾರ ಇನಾಮುಲ್ ಹಕ್ ಆಗಮಿಸಿದ್ದಾರೆ.

ಸಾರ್ಕ್ ಸಭೆಯ ನಂತರ ಉಭಯ ದೇಶಗಳ ನಾಯಕರು ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಕಾಶ್ಮಿರ ಹಾಗೂ ಸಿಯಾಚಿನ್ ಸೇರಿದಂತೆ ಇನ್ನಿತರ ವಿಷಯಗಳ ಕುರಿತಂತೆ ಪ್ರಣಭ ಅವರೊಂದಿಗೆ ಮಾತುಕತೆ ನಡೆಸಲಾಗುವುದು. ಪ್ರಧಾನಿಯವರನ್ನು ಭೇಟಿ ಮಾಡುವ ಉದ್ದೇಶವಿದೆ ಎಂದು ಹಕ್ ತಿಳಿಸಿದ್ದಾರೆ.

ಉಭಯ ನಾಯಕರು ದ್ವಿಪಕ್ಷಿಯ ಮಾತುಕತೆಗಳ ಪರಿಶೀಲನೆ ನಡೆಸುತ್ತಿದ್ದು,ಯಾವ ಹಂತಕ್ಕೆ ಬಂದು ತಲುಪಲಿದೆ ಎನ್ನುವುದನ್ನು ಕಾದುನೋಡಬೇಕಾಗಿದೆ ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಶಿವಶಂಕರ ಮೆನನ್ ತಿಳಿಸಿದ್ದಾರೆ.

ಮತ್ತಷ್ಟು
ಪರಮಾಣು ಉತ್ಪಾದನೆಯಿಂದ ಹೊರಬನ್ನಿ-ಬುಷ್
ಅಕ್ರಮ ಮತದಾನವಾದಲ್ಲಿ ಭಾರಿ ಪ್ರತಿಭಟನೆ- ಭುಟ್ಟೋ
ತೈಲ ಸರಬರಾಜು:ಒಪೆಕ್ ಮಾತುಕತೆ
ನವಾಜ್ ಸಹೋದರ ಶಾಹಬಾಜ್‌ಗೆ ಜಾಮೀನು
ಪಾರ್ಸಲ್ ಸ್ಪೋಟ: ಮಹಿಳೆ ಸಾವು
ಭುಟ್ಟೋ ದುಬೈ ಪ್ರಯಾಣಕ್ಕೆ ತಡೆ