ಕಾಂಬೋಡಿಯಾದ ಪ್ರಧಾನಿ ಹುನ್ ಸೆನ್ ದ್ವಿಪಕ್ಷೀಯ ಮಾತುಕತೆಗಾಗಿ ನಾಲ್ಕು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ.
ಹುನ್ ಸೆನ್ ಅವರ ಜೊತೆಯಲ್ಲಿ ಉಪಪ್ರಧಾನಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ, ರಕ್ಷಣಾ ಸಚಿವ, ವಾಣಿಜ್ಯ ಸಚಿವ ಜಲಸಂಪನ್ಮೂಲ ಹಾಗೂ ಭೂಗರ್ಭಖಾತೆ ಸಚಿವ, ಕೃಷಿ ಮತ್ತು ಮೀನುಗಾರಿಕೆ ಸಚಿವರು ಸೇರಿದಂತೆ 12 ಸದಸ್ಯರ ನಿಯೋಗ ಭಾರತಕ್ಕೆ ಭೇಟಿ ನೀಡಿದೆ.
ನಾಳೆ ಸಾಯಂಕಾಲ ಪ್ರಧಾನಿ ಮನಮೋಹನ್‌ಸಿಂಗ್ ಅವರು ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಭೇಟಿ ಮಾತುಕತೆ ನಡೆಸಲಿದ್ದಾರೆ.
ರಾಷ್ಟ್ರಾಧ್ಯಕ್ಷೆ ಪ್ರತಿಭಾ ಪಾಟೀಲ್ ಹಾಗೂ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಹಾಗೂ ಪ್ರಣಭ ಮುಖರ್ಜಿ ಅವರನ್ನು ಹುನ್ ಸೆನ್ ಭೇಟಿ ಮಾಡಲಿದ್ದಾರೆ.
|