ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಹಿಳಾ ಆತ್ಮಹತ್ಯಾ ದಾಳಿ:16 ಮಂದಿಸಾವು
ಇರಾಕ್‌ನ ದಿಯಾಲಾ ಪ್ರಾಂತ್ಯದಲ್ಲಿ ಆಲ್-ಕೈದಾ ಬೆಂಬಲಿತ ಕಚೇರಿಯ ಮೇಲೆ ದಾಳಿ ನಡೆಸಿದ ಆತ್ಮಹತ್ಯಾದಳದ ಮಹಿಳಾ ಸದಸ್ಯೆ ತನ್ನನ್ನು ತಾನು ಸ್ಪೋಟಿಸಿಕೊಂಡಾಗ 16 ಮಂದಿ ಸಾವನ್ನಪ್ಪಿದ್ದಾರೆ.

ಬಾಗ್ದಾದ್‌ನಿಂದ 100ಕಿ.ಮಿ. ದೂರದಲ್ಲಿರುವ ದಿಯಾಲಾ ಪ್ರಾಂತ್ಯದ ರಾಜಧಾನಿ ಮುಖ್‌ದಾದಿಯಾ ಪಟ್ಟಣದಲ್ಲಿ ಸ್ಪೋಟದಿಂದ ಜನತೆ ಭಯಭೀತರಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಚೇರಿಯನ್ನು ಪ್ರವೇಶಿಸಿದ ನಂತರ ಆತ್ಮಹತ್ಯಾದಳದ ಮಹಿಳಾ ಸದಸ್ಯೆ ಆಲ್-ಕೈದಾ ವಿರೋಧಿ ದಳದ ಸ್ಥಳಿಯ ಗುಂಪಿನ ಸದಸ್ಯಳಾಗಿದ್ದಾಳೆ ಎಂದು ಪೊಲೀಸ್ ಅಧಿಕಾರಿ ನಾಜಿಮ್ ತಿಳಿಸಿದ್ದಾರೆ.

ಘಟನೆಯಲ್ಲಿ 16 ಮಂದಿ ಸಾವನ್ನಪ್ಪಿದ್ದು, 27 ಮಂದಿ ಗಾಯಾಳುಗಳನ್ನು ಹತ್ತಿರದ ಬಖೂಬಾ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸುನ್ನಿ ಬುಡಕಟ್ಟು ನಾಯಕರು ಅಮೆರಿಕದಿಂದ ಹಣವನ್ನು ಪಡೆದು ನಾಗರಿಕರ ಮೇಲೆ ದಾಳಿ ಮಾಡುತ್ತಿರುವ ಆಲ್-ಕೈದಾ ವಿರುದ್ದ ಹೋರಾಟವನ್ನು ಮಾಡುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮತ್ತಷ್ಟು
ವೈಮಾನಿಕ ದಾಳಿ: 17 ತಾಲಿಬಾನಿಗಳ ಸಾವು
ದುಬೈಗೆ ಭುಟ್ಟೋ ಪ್ರಯಾಣ
ಕಾಂಬೋಡಿಯಾ ಪ್ರಧಾನಿ ಭಾರತ ಭೇಟಿ
ಭಾರತ ಪಾಕ್ ಮಾತುಕತೆ
ಪರಮಾಣು ಉತ್ಪಾದನೆಯಿಂದ ಹೊರಬನ್ನಿ-ಬುಷ್
ಅಕ್ರಮ ಮತದಾನವಾದಲ್ಲಿ ಭಾರಿ ಪ್ರತಿಭಟನೆ- ಭುಟ್ಟೋ