ಕಾಂಬೋಡಿಯಾದ ಪ್ರಧಾನಿ ಹುನ್ಸೆನ್ ಇಂದು ಸಂಜೆ ಪ್ರಧಾನಿ ಮನಮೋಹನ್ಸಿಂಗ್ ಹಾಗೂ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ.
ಮೂರು ಪ್ರಮುಖ ವಾಣಿಜ್ಯ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಹುನ್ಸೆನ್ ಮಾತನಾಡಲಿದ್ದಾರೆ.
ಈ ಪ್ರವಾಸದ ಸಂದರ್ಭದಲ್ಲಿ ಹೈಟೆಕ್ ನಗರವಾದ ಹೈದ್ರಾಬಾದ್ನಲ್ಲಿರುವ ಗ್ರಾಮೀಣ ಅಭಿವೃದ್ಧಿ ಸಂಸ್ಥೆಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ.
ಜುಲೈ ತಿಂಗಳಲ್ಲಿ ಭಾರತಕ್ಕೆ ಬಂದಿಳಿದ ಕೆಲವೆ ಗಂಟೆಗಳಲ್ಲಿ ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ನಿಧನದಿಂದಾಗಿ ಕಾಂಬೋಡಿಯಾ ಪ್ರಧಾನಿ ಯಾವುದೇ ಕಾರ್ಯಕ್ರಮಗಳಿಲ್ಲದೇ ಮರಳಿ ದೇಶಕ್ಕೆ ತೆರಳಿದ್ದರು.
ಹುನ್ಸೆನ್ ಅವರ ಜೊತೆಯಲ್ಲಿ ಉಪ ಪ್ರಧಾನಿ, ವಾಣಿಜ್ಯ ಸಚಿವರು ಹಾಗೂ ಜಲಸಂಪನ್ಮೂಲ,ಕೃಷಿ ಸಚಿವರು ಭಾರತ ಭೇಟಿಗಾಗಿ ಆಗಮಿಸಿದ್ದಾರೆ.
|