ದೇಶದಲ್ಲಿ ಹೇರಲಾದ ತುರ್ತುಪರಿಸ್ಥಿತಿಯನ್ನು ಡಿಸೆಂಬರ್ 15 ರಂದು ಅಂತ್ಯಗೊಳಿಸಲಾಗುವುದು ಎಂದು ಸರಕಾರದ ಉನ್ನತ ಕಾನೂನು ಅಧಿಕಾರಿಗಳು ತಿಳಿಸಿದ್ದಾರೆ.
ತುರ್ತುಪರಿಸ್ಥಿತಿಯನ್ನು ಡಿಸೆಂಬರ್ 15 ರಂದು ಹಿಂದಕ್ಕೆ,ತೆಗೆದುಕೊಳ್ಳಲಾಗುವುದು ತಪ್ಪಿದ್ದಲ್ಲಿ ಡಿಸೆಂಬರ್ 16ಕ್ಕೆ ಖಂಡಿತವಾಗಿ ಅಂತ್ಯಗೊಳ್ಳುತ್ತದೆ ಎಂದು ಅಟಾರ್ನಿ ಜನರಲ್ ಖಯ್ಯೂಮ್ ತಿಳಿಸಿದ್ದಾರೆ.
ತುರ್ತುಪರಿಸ್ಥಿತಿ ಹಿಂದಕ್ಕೆ ತೆಗೆದುಕೊಂಡ ನಂತರ ಪಾಕಿಸ್ತಾನದ ಸಂವಿಧಾನದಲ್ಲಿ ಕೆಲ ತಿದ್ದುಪಡಿಗಳನ್ನು ತಂಡು ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಸಂವಿಧಾನದ ತಿದ್ದುಪಡಿಗಳಲ್ಲಿ ರಾಷ್ಟ್ರಾಧ್ಯಕ್ಷರು ಜಾರಿಗೊಳಿಸಿದ ತುರ್ತುಪರಿಸ್ಥಿತಿಯನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ ಎನ್ನುವ ಅಂಶ ಕೂಡಾ ಒಂದು ಎಂದು ಹೇಳಿದ್ದು, ತುರ್ತುಪರಿಸ್ಥಿತಿ ಕುರಿತಂತೆ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿರುವುದರಿಂದ ಈ ವಿಷಯದಲ್ಲಿ ಸಂಸತ್ತಿನ ಅನುಮತಿ ಬೇಕಾಗಿಲ್ಲ ಎಂದು ಖಯ್ಯಿಮ್ ಹೇಳಿದ್ದಾರೆ.
|