ಮಲೇಷಿಯಾದಲ್ಲಿರುವ ಹಿಂದೂ ಸಂಘಟನೆಗಳು, ಭಯೋತ್ಪಾದಕರು , ಸ್ಥಳಿಯ ಅಪರಾಧಿಗಳು ಹಾಗೂ ಎಲ್ಟಿಟಿಇ ಉಗ್ರರ ಬೆಂಬಲವನ್ನು ಪಡೆಯುತ್ತಿದ್ದಾರೆ ಎನ್ನುವ ಮಲೇಷಿಯಾ ಸರಕಾರದ ಹೇಳಿಕೆಯಿಂದಾಗಿ ಹಿಂದೂಗಳ ಜನಾಂಗೀಯ ಘರ್ಷಣೆಗೆ ಹೊಸತೊಂದು ತಿರುವು ನೀಡಿದೆ
ಹಿಂದೂ ಸಂಘಟನೆಗಳು, ಭಯೋತ್ಪಾದಕರು , ಸ್ಥಳಿಯ ಅಪರಾಧಿಗಳು ಹಾಗೂ ಎಲ್ಟಿಟಿಇ ಉಗ್ರರ ಬೆಂಬಲವನ್ನು ಪಡೆಯುತ್ತಿದ್ದಾರೆ ಎನ್ನುವ ಮಲೇಷಿಯಾ ಸರಕಾರದ ಹೇಳಿಕೆ ನಿರಾಧಾರವಾಗಿದ್ದು, ನಮ್ಮನ್ನು ಜೈಲಿಗೆ ತಳ್ಳುವ ಸಂಚಾಗಿದೆ ಎಂದು ಹಿಂದೂ ಸಂಘಟಕರು ಹೇಳಿದ್ದಾರೆ.
ಹಿಂದೂ ಸಂಘಟನೆಗಳ ಕಾರ್ಯವೈಖರಿ ಕುರಿತಂತೆ ಪೊಲೀಸರು ವ್ಯಾಪಕ ತನಿಖೆ ನಡೆಸಿದ್ದು, ಭಯೋತ್ಪಾದಕ ಸಂಘಟನೆಗಳಿಂದ ಸಹಕಾರ ಹಾಗೂ ಬೆಂಬಲವನ್ನು ಪಡೆಯುತ್ತಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮಹಾ ನಿರ್ದೆಶಕ ಮೌಸಾ ಹಸನ್ ತಿಳಿಸಿದ್ದಾರೆ.
ಹಿಂದೂ ಜನಾಂಗೀಯ ಸಂಘಟಕರು ಸತ್ಯವನ್ನು ಮರೆಮಾಚಿ, ವಿಷಯವನ್ನು ಪಲ್ಲಟಗೊಳಿಸಿ ಇಂಗ್ಲೆಂಡ್ , ಅಮೆರಿಕ, ವಿಶ್ವಸಂಸ್ಥೆ ಹಾಗೂ ಯುರೋಪ್ ರಾಷ್ಟ್ರಗಳಿಂದ ಅಂತಾರಾಷ್ಟ್ರೀಯ ಮಟ್ಟದ ಬೆಂಬಲವನ್ನು ಪಡೆಯಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ
|