ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭುಟ್ಟೋ ಕಚೇರಿ ಮೇಲೆ ಉಗ್ರನ ದಾಳಿ:3 ಸಾವು
ಪಾಕಿಸ್ತಾನದ ಮಾಜಿ ಪ್ರಧಾನಿ ಬೆನ್‌ಜಿರ್ ಭುಟ್ಟೋ ಅವರ ಕಚೇರಿ ಮೇಲೆ ಅಪರಿಚಿತ ಉಗ್ರನು ದಾಳಿ ನಡೆಸಿ ಮೂವರನ್ನು ಬೆಂಬಲಿಗರನ್ನು ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾ ನಗರದಿಂದ ನೈಋತ್ಯಕ್ಕೆ 150 ಮೈಲು ದೂರದಲ್ಲಿರುವ ನಸೀರಾಬಾದ್‌‌ನಲ್ಲಿ ಈ ಘಟನೆ ನಡೆದಿದ್ದು,ಅಪರಿಚಿತ ಉಗ್ರನ ಹಿಂದಿನ ಕೈವಾಡದ ಬಗ್ಗೆ ತಿಳಿದು ಬಂದಿಲ್ಲವೆಂದು ಪೊಲೀಸ್ ಮುಖ್ಯಸ್ಥ ವಾಜಿದ್ ಅಕ್ಬರ್ ತಿಳಿಸಿದ್ದಾರೆ.

ಕಳೆದ ಚುನಾವಣೆಗಳಲ್ಲಿ ಕೊಲೆ ಮತ್ತು ಹಿಂಸಾಚಾರ ಸಾಮಾನ್ಯವಾಗಿದ್ದು, ಮುಂಬರುವ ಜನೆವರಿ ತಿಂಗಳಿನಲ್ಲಿ ನಡೆಯುವ ಚುನಾವಣೆಯಲ್ಲಿ ವ್ಯಾಪಕ ಹಿಂಸಾಚಾರ ನಡೆಯುವ ಸಾಧ್ಯೆತೆಗಳಿವೆ ಎಂದು ಪೊಲೀಸ್ ಅಧಿಕಾರಿ ಶಂಕೆ ವ್ಯಕ್ತಪಡಿಸಿದ್ದಾರೆ.

ಎಂಟು ವರ್ಷಗಳ ನಂತರ ಭುಟ್ಟೋ ತವರಿಗೆ ಮರಳಿದಾಗ ಕರಾಚಿಯಲ್ಲಿ ಬಾಂಬ್ ಸ್ಪೋಟ ನಡೆಸಿ 140 ಮಂದಿ ಸಾವಿಗೆ ಉಗ್ರಗಾಮಿಗಳು ಕಾರಣರಾಗಿದ್ದರು.

ಪಾಕಿಸ್ತಾನದಲ್ಲಿ ನವೆಂಬರ್ 3ರಂದು ಪಾಕ್ ಅಧ್ಯಕ್ಷ ತುರ್ತುಪರಿಸ್ಥಿತಿ ಜಾರಿಗೆ ತಂದ ನಂತರ ರಾಜಕೀಯದಲ್ಲಿ ಮಹತ್ತರ ಬದಲಾವಣೆಗಳಾಗಿವೆ ಎಂದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ಹಿಂದೂ ಸಂಘಟನೆಗಳಿಗೆ ಭಯೋತ್ಪಾದಕರ ಸಂಪರ್ಕ
ತುರ್ತುಪರಿಸ್ಥಿತಿ ಡಿಸೆಂಬರ್ 15ಕ್ಕೆ ಅಂತ್ಯ
22 ತಾಲಿಬಾನ್ ಬೆಂಬಲಿಗರ ಬಂಧನ
ಹುನ್‌ಸೆನ್, ಮನಮೋಹನ್‌ಸಿಂಗ್ ಭೇಟಿ
ಮಹಿಳಾ ಆತ್ಮಹತ್ಯಾ ದಾಳಿ:16 ಮಂದಿಸಾವು
ವೈಮಾನಿಕ ದಾಳಿ: 17 ತಾಲಿಬಾನಿಗಳ ಸಾವು