ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯರೋಪ್, ಆಫ್ರಿಕಾ ಶೃಂಗಸಭೆ ಆರಂಭ
ಯುರೋಪಿಯನ್ ದೇಶಗಳ 27 ನಾಯಕರು ಹಾಗೂ ಆಫ್ರಿಕಾದ 53 ನಾಯಕರುಗಳು ಪೋರ್ಚಗಲ್‌ನ ಲಿಸ್‌ಬೆನ್‌ನಲ್ಲಿ ಏಳು ವರ್ಷಗಳ ನಂತರ ಆರಂಭವಾದ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ಯುರೋಪ್ ಸಂಯುಕ್ತ ರಾಷ್ಟ್ರಗಳು ಹಾಗೂ ಆಫ್ರಿಕಾ ಖಂಡ ಕಳೆದುಹೋದ ಕಹಿನೆನಪುಗಳನ್ನು ಮರೆತು ಆರಂಭವಾದ ಶೃಂಗಸಭೆಯಲ್ಲಿ ನೂತನ ಅಧ್ಯಾಯ ಆರಂಭಿಸಬೇಕೆಂದು ಪರಸ್ಪರ ನಿರ್ಧಾರಕ್ಕೆ ಬರಲಾಯಿತು.

ಯುರೋಪ್ ಸಂಯುಕ್ತ ರಾಷ್ಟ್ರಗಳು ಆಫ್ರಿಕಾದೊಂದಿಗೆ ಜೊತೆಯಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಅಭಿವೃದ್ಧಿ ಸಾಧಿಸಬೇಕಾಗಿದೆ ಎಂದು ಯುರೋಪ್ ನಾಯಕರು ಕರೆ ನೀಡಿದರು.

ಪ್ರಸ್ತುತ ಆಫ್ರಿಕಾ ದೇಶದಲ್ಲಿ ಸರಾಸರಿ ಪ್ರತಿ ಮನುಷ್ಯ ಪ್ರತಿದಿನ 1 ಡಾಲರ್‌ಗಿಂತ ಕಡಿಮೆ ಆರ್ಥಿಕ ಕೊರತೆಯಲ್ಲಿ ಜೀವನ ಸವೆಸುತ್ತಿದ್ದು,ಸರಾಸರಿ ಜೀವನಾಧಾರ ಹೆಚ್ಚಿಸಲು ಯುರೋಪ್ ರಾಷ್ಟ್ರಗಳು ಬೆಂಬಲಿಸಬೇಕೆಂದು ಆಫ್ರಿಕಾ ಮನವಿ ಮಾಡಿದೆ.

ಯುರೋಪ್ ಆಫ್ರಿಕಾ ಉತ್ತಮ ಬಾಂದವ್ಯ ವೃದ್ಧಿಸಿಕೊಂಡು ಸಾಧನೆಯತ್ತ ಸಾಗಬೇಕಿದೆ ಎಂದು ಯುರೋಪ್‌ನ ಅಭಿವೃದ್ಧಿ ಮತ್ತು ಮಾನವೀಯತೆ ಇಲಾಖೆಯ ಆಯಕ್ತ ಲೂಯಿಸ್ ಮೈಖಲ್ ತಿಳಿಸಿದರು.

ಯುರೋಪ್ ದೇಶಗಳು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಾದ ಭಾರತ, ಬ್ರೆಜಿಲ್ ಮತ್ತು ದಕ್ಷಿಣಾ ಆಫ್ರಿಕಾ ದೇಶಗಳೊಂದಿಗೆ ಮಾನವ ಹಕ್ಕುಗಳು, ಭ್ರಷ್ಟಾಚಾರ, ರಾಜಕೀಯ ಸ್ಥಿರತೆ ವಿಷಯಗಳಲ್ಲಿ ಉತ್ತಮ ಭಾಂದವ್ಯ ಹೊಂದಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.


ಮತ್ತಷ್ಟು
ಮುಷರಫ್ ಜೊತೆ ಸಂಧಾನಕ್ಕೆ ಸಿದ್ದ -ಭುಟ್ಟೋ
ಷರೀಫ್ ನಾಮಪತ್ರ ಪರಿಶೀಲನೆಗೆ ಖಯ್ಯುಮ್ ಒತ್ತಾಯ
ಭುಟ್ಟೋ ಕಚೇರಿ ಮೇಲೆ ಉಗ್ರನ ದಾಳಿ:3 ಸಾವು
ಹಿಂದೂ ಸಂಘಟನೆಗಳಿಗೆ ಭಯೋತ್ಪಾದಕರ ಸಂಪರ್ಕ
ತುರ್ತುಪರಿಸ್ಥಿತಿ ಡಿಸೆಂಬರ್ 15ಕ್ಕೆ ಅಂತ್ಯ
22 ತಾಲಿಬಾನ್ ಬೆಂಬಲಿಗರ ಬಂಧನ