ತಮಿಳು ಉಗ್ರರ ಹಾಗೂ ಸೇನಾಪಡೆಗಳ ಮಧ್ಯೆ ನಡೆದ ಘರ್ಷಣೆಯಲ್ಲಿ ಒಬ್ಬ ಸೈನಿಕ ಸೇರಿದಂತೆ ಏಳು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ.
ಶ್ರೀಲಂಕಾದ ಉತ್ತರ ಭಾಗದಲ್ಲಿರುವ ಗಡಿರೇಖೆ ಬಳಿ ಸೇನಾಪಡೆಗಳು ಮತ್ತು ಉಗ್ರರ ನಡುವೆ ಭೀಕರ ಕದನ ನಡೆದು ಹಿಂಸಾಚಾರ ಉಲ್ಬಣಿಸಿತೆಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಉಗ್ರರ ವಶದಲ್ಲಿರುವ ದಕ್ಷಿಣ ಮನ್ನಾರ್ ಬಳಿ ಸೈನಿಕರು ದಾಳಿ ನಡೆಸಿದಾಗ ಮರುದಾಳಿ ನಡೆಸಿದ ಉಗ್ರರಲ್ಲಿ ಎಳು ಮಂದಿ ಉಗ್ರರು ಹತರಾಗಿದ್ದಾರೆ.
ಉತ್ತರ ಭಾಗದಲ್ಲಿರುವ ಪೆನಿಸುಲಾ ಪ್ರದೇಶ ಸರಕಾರದ ನಿಯಂತ್ರಣದಲ್ಲಿದ್ದು, ರವಿವಾರದಂದು ತಮಿಳು ಯವಕನನ್ನು ಉಗ್ರರು ಹತ್ಯೆ ಮಾಡಿದ ಹಿನ್ನಲೆಯಲ್ಲಿ ಕೆಲ ಕಾಲ ಉದ್ರಿಕ್ತ ಪರಿಸ್ಥಿತಿ ತಲೆದೋರಿತ್ತು ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಕದನ ನಡೆದ ಸ್ಥಳವು ನಿಷೇಧಿತ ಪ್ರದೇಶವಾಗಿದ್ದರಿಂದ ಘರ್ಷಣೆಯಲ್ಲಿ ಹತರಾದವರ ಹಾಗೂ ಗಾಯಾಳುಗಳ ನಿಖರ ಸಂಖ್ಯೆ ಸ್ಪಷ್ಟವಾಗಿಲ್ಲವೆಂದು ಮಾಧ್ಯಮ ಮೂಲಗಳು ಆತಂಕ ವ್ಯಕ್ತಪಡಿಸಿವೆ.
|