ಮಕ್ಕಳನ್ನು ಕರೆದೊಯ್ಯಿತ್ತಿದ್ದ ವಾಹನಕ್ಕೆ ಆತ್ಮಹತ್ಯಾದಳದ ಸದಸ್ಯ ಡಿಕ್ಕಿ ಹೊಡೆದ ಪರಿಣಾಮವಾಗಿ ವಾಹನದಲ್ಲಿದ್ದ ಐವರು ಶಾಲಾ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಇಸ್ಲಾಮಾಬಾದ್ ನಗರದಿಂದ 65 ಕಿ.ಮಿ. ದೂರದಲ್ಲಿರುವ ಅಟ್ಟಾಕ್ ಜಿಲ್ಲೆಯ ಕಾಮ್ರಾ ವಾಯುಸೇನಾ ಕಚೇರಿಯ ಹೊರಗಡೆ ಈ ಘಟನೆ ಸಂಭವಿಸಿದೆ.
ಮಕ್ಕಳನ್ನು ಶಾಲೆಗೆ ವಾಹನದಲ್ಲಿ ಕರೆದೊಯ್ಯಿತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಚಾಲಕ ಗಾಯಗೊಂಡಿದ್ದಾನೆ ಎಂದು ಮೇಜರ್ ಜನರಲ್ ವಹೀದ್ ಅರ್ಷದ್ ತಿಳಿಸಿದ್ದಾರೆ.
ಸ್ವಾತ್ ಕಣಿವೆಯ ಚೆಕ್ ಪೋಸ್ಟ್ ಬಳಿ ಆತ್ಮಹತ್ಯಾ ದಾಳಿ ನಡೆಸಿ 10 ಮಂದಿ ಸಾವನ್ನಪ್ಪಿ 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದ ಘಟನೆ ಮಾಸುವ ಮುನ್ನವೆ ಮತ್ತೊಂದು ದಾಳಿ ನಡೆದಿರುವುದು ಜನರಲ್ಲಿ ಆತಂಕ ಮೂಡಿಸಿದೆ.
|