ಪಾಕಿಸ್ತಾನದ ಚುನಾವಣಾ ಆಯೋಗ ಭಾರಿ ಭ್ರಷ್ಟತೆಯಿಂದ ಕೂಡಿದೆ ಎಂದು ಮಾಜಿ ಪ್ರಧಾನಿ ಬೆನ್‌ಜಿರ್ ಭುಟ್ಟೋ ಆರೋಪಿಸಿದ್ದಾರೆ.
ಮುಂಬರುವ ಜನೆವರಿ 8ರಂದು ನಡೆಯಲಿರುವ ಚುನಾವಣೆ ಮುಕ್ತ ಪಾರದರ್ಶಕವಾಗಿರದಿದ್ದಲ್ಲಿ ಪಾಕಿಸ್ತಾನ ಆತಂಕದ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಬೆನ್‌ಜಿರ್ ತಿಳಿಸಿದ್ದಾರೆ.
ಜಗತ್ತಿನ ಪ್ರಬಲ ರಾಷ್ಟ್ರಗಳು ಚುನಾವಣೆಗಳು ಮುಕ್ತವಾಗಿ ನಡೆಯುವಂತೆ ಪಾಕಿಸ್ತಾನದ ಮೇಲೆ ಒತ್ತಡ ಹೇರವುದು ಅಗತ್ಯವಾಗಿದೆ ಎಂದು ಬೆನ್‌ಜಿರ್ ಪ್ರತಿಪಾದಿಸಿದ್ದಾರೆ.
ಪ್ರತ್ಯೇಕತವಾದಿಗಳನ್ನು ದೂರವಿಡಲು ಪ್ರಜಾಪ್ರಭುತ್ವ ಉತ್ತಮ ಮಾರ್ಗವಾಗಿದೆ. ಆದರೆ ಮುಕ್ತ ಚುನಾವಣೆಗಳು ನಡೆದಲ್ಲಿ ಮಾತ್ರ ದೇಶದಲ್ಲಿನ ಹಿಂಸಾಚಾರವನ್ನು ಕೊನೆಗಾಣಿಸಬಹುದಾಗಿದೆ ಎಂದು ಹೇಳಿದ್ದಾರೆ.
ಚುನಾವಣಾ ಅಧಿಕಾರಿಗಳಿಂದ ಪ್ರತಿ ಜಿಲ್ಲೆಯಲ್ಲಿ 20 ಸಾವಿರ ಮತಗಳ ದುರುಪಯೋಗಪಡಿಸಲು ಸಿದ್ದತೆ ನಡೆದಿದೆ ಎಂದು ವರದಿಗಳು ಬಹಿರಂಗವಾಗಿದ್ದು,ಮುಕ್ತ ಚುನಾವಣೆ ನಡೆಸಲು ಅಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
|