ಬೆನ್‌ಜಿರ್ ಭುಟ್ಟೋ ಚುನಾವಣಾ ಬಹಿಷ್ಕಾರ ಕುರಿತಂತೆ ಮನವೊಲಿಸಲು ವಿಫಲರಾದ ನವಾಜ್ ಷರೀಫ್,ಮುಂಬರುವ ಚುನಾವಣೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ.
ತುರ್ತುಪರಿಸ್ಥಿತಿ ಹಾಗೂ ನ್ಯಾಯಾಧೀಶರ ಮರುನೇಮಕ ಕುರಿತಂತೆ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರ ವಿರೋಧ ಪಕ್ಷಗಳಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಪಾಲ್ಗೊಳ್ಳಲು ಪಕ್ಷದ ಕಾರ್ಯಕಾರಿ ಮಂಡಳಿ ನಿರ್ಧರಿಸಿದೆ ಎಂದರು.
ದೇಶದ ಇತರ ಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬದ್ದರಾಗಿದ್ದರೂ ಪ್ರಮುಖ ಪಕ್ಷಗಳು ಚುನಾವಣೆಯಲ್ಲಿ ಪಾಲ್ಗೊಳ್ಳುವುದರಿಂದ ಉಳಿದ ಪಕ್ಷಗಳು ಮಹತ್ವ ಕಳೆದುಕೊಂಡಿವೆ.
|